November 22, 2024

6 ತಿಂಗಳ ಹಿಂದೆ ಮೃತ ಅಧಿಕಾರಿಯ ವರ್ಗಾವಣೆ: ಮುಜುಗರ ತಂದಿಟ್ಟ ಸರ್ಕಾರದ ಆದೇಶ

0

ಕಲಬುರಗಿ : ಆರು ತಿಂಗಳ ಹಿಂದೆ ಸಾವನ್ನಪಿದ್ದ ಅಧಿಕಾರಿಗೆ ಸರ್ಕಾರ ವರ್ಗಾವಣೆ ಆದೇಶ ಹೊರಡಿಸಿದೆ. ಸರ್ಕಾದ ಈ ಆದೇಶ ಇಲಾಖೆಗೆ ಮುಜುಗರ ತಂದಿಟ್ಟಿದೆ.

ನಗರಾಭಿವೃದ್ಧಿ ಇಲಾಖೆಯ ಕಿರಿಯ ಇಂಜನಿಯರ್ ಅಶೋಕ ಪುಟಪಾಕ್ ಎಂಬ ಅಧಿಕಾರಿ ಆರು ತಿಂಗಳ ಹಿಂದೆ ಮೃತಪಟ್ಟಿದ್ದು ಜುಲೈ 9 ರಂದು ಕೊಡಗಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ವಾಸ್ತವವಾಗಿ, ಅಶೋಕ ಪುಟಪಾಕ್ ಕಳೆದ ಜನೆವರಿ 12 ರಂದು ಮೃತ ಪಟ್ಟಿದ್ದರು. ಈ ವರ್ಗಾವಣೆಯ ಪ್ರತಿ ಸಾಮಾಜಿಕಜಾಲತಾಣದಲ್ಲಿ ವೈರಲ್ ಆಗಿದ್ದು ನಗರಾಭಿವೃದ್ಧಿ ಇಲಾಖೆ ಹಾಸ್ಯಾಸ್ಪದ ಎಡವಟ್ಟು ಮಾಡಿಕೊಂಡಿದೆ.

Leave a Reply

Your email address will not be published. Required fields are marked *

error: Content is protected !!