ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ಪ್ರಕರಣ: ಆರೋಪಿಗಳಿಗೆ ಗನ್ ನೀಡಿದ್ದ ಇಬ್ಬರು ಯುವತಿಯರ ಬಂಧನ
ಮುಂಬೈ: ನಟ ಟೈಗರ್ ಶ್ರಾಫ್‌ಗೆ ಸಂಬಂಧಿಸಿದ ಗುಂಡಿನ ದಾಳಿಯ ಪ್ರಕರಣಕ್ಕೆ ಸಂಬಂಧಿಸಿದಂತೆ, ದೆಹಲಿ ಪೊಲೀಸರ ವಿಶೇಷ ಘಟಕವು ನಾಲ್ವರು ವ್ಯಕ್ತಿಗಳನ್ನು ಬಂಧಿಸಿದೆ.
ಮೂಲಗಳ ಪ್ರಕಾರ, ಭಾನುವಾರ ಸಂಜೆ ನಟನ ಕಾರಿನ ಮೇಲೆ ಗುಂಡು ಹಾರಿಸಿದ ಆರೋಪಿಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದ ಗುಂಪಿನ ಭಾಗವಾಗಿದ್ದ ಇವರು, ಲಾರೆನ್ಸ್ ಬಿಷ್ಟೋಯಿ ಗ್ಯಾಂಗ್‌ಗೆ ನಂಟು ಹೊಂದಿದ್ದಾರೆ ಎಂದು ಶಂಕಿಸಲಾಗಿದೆ.
ಬಂಧಿತರನ್ನು ಕುನಾಲ್, ಸುಮಿತ್, ರಾಧಾ ಮತ್ತು ಬಬಿತಾ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ 19 ರಿಂದ 23 ವರ್ಷ ವಯಸ್ಸಿನವರಾಗಿದ್ದಾರೆ. ಇವರಲ್ಲಿ ಕುನಾಲ್ ಮತ್ತು ಸುಮಿತ್ ಹರಿಯಾಣದ ಸೋನಿಪತ್‌ನವರಾಗಿದ್ದರೆ, ರಾಧಾ ಮತ್ತು ಬಬಿತಾ ಉತ್ತರ ಪ್ರದೇಶದವರಾಗಿದ್ದಾರೆ.
ತನಿಖಾಧಿಕಾರಿಗಳ ಪ್ರಕಾರ, ಬೇರೊಂದು ಪ್ರಕರಣದಲ್ಲಿ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಕುನಾಲ್, ನಟ ಟೈಗರ್ ಮೇಲಿನ ದಾಳಿಯ ಹೊಣೆ ಹೊತ್ತುಕೊಂಡಿರುವ ಅನಿಲ್ ಪಂಡಿತ್‌ನೊಂದಿಗೆ ಸಂಪರ್ಕದಲ್ಲಿದ್ದನು. ಅಮೆರಿಕದಿಂದ ಈ ಗ್ಯಾಂಗ್‌ನ ಚಟುವಟಿಕೆಗಳನ್ನು ನಡೆಸುತ್ತಾನೆ ಎಂದು ಹೇಳಲಾದ ಅನಿಲ್ ಪಂಡಿತ್, ಆಡಿಯೋ ಸಂದೇಶವೊಂದರ ಮೂಲಕ ಈ ದಾಳಿಯ ಹೊಣೆಗಾರಿಕೆಯನ್ನು ಒಪ್ಪಿಕೊಂಡಿದ್ದಾನೆ.




