ಕೊಚ್ಚಿ: ಗಲಾಟೆ ಬಿಡಿಸಲು ಮುಂದಾದ ಇಬ್ಬರು ಪೊಲೀಸರಿಗೆ ಚೂರಿ ಇರಿತ
ಕೊಚ್ಚಿ: ವೈಪಿನ್‌ನಲ್ಲಿ ಸ್ಥಳೀಯ ಗ್ಯಾಂಗ್ ಹಾಗೂ ಖಾಸಗಿ ಬಸ್ ಸಿಬ್ಬಂದಿ ನಡುವೆ ನಡೆದ ಗಲಾಟೆಯನ್ನು ಬಿಡಿಸಲು ಮುಂದಾದ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ದುಷ್ಕರ್ಮಿಗಳು ಇರಿದು ಗಾಯಗೊಳಿಸಿರುವ ಆಘಾತಕಾರಿ ಘಟನೆ ಕೊಚ್ಚಿಯಲ್ಲಿ ನಡೆದಿದೆ.
ಗಾಯಗೊಂಡ ಪೊಲೀಸ್ ಅಧಿಕಾರಿಗಳನ್ನು ನಝರಕ್ಕಲ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಜಿತಿನ್ ಹಾಗೂ ಕಾನ್‌ಸ್ಟೆಬಲ್ ರಾಗೇಶ್ ಎಂದು ಗುರುತಿಸಲಾಗಿದೆ. ವಿಶೇಷವೆಂದರೆ, ಎಸ್‌ಐ ಜಿತಿನ್ ಅವರು ಘಟನೆಗೆ ಜಸ್ಟ್ ಒಂದು ದಿನ ಮೊಷ್ಟೆಯಷ್ಟೇ ನಝರಕ್ಕಲ್ ಪೊಲೀಸ್ ಠಾಣೆಯಲ್ಲಿ ಅಧಿಕಾರ ವಹಿಸಿಕೊಂಡಿದ್ದರು.
ಕೊಲೆ ಪ್ರಕರಣದ ಆರೋಪಿ ‘ಮುನ್ನಾ’ ಎಂಬ ಗ್ಯಾಂಗ್ ನಾಯಕನ ನೇತೃತ್ವದಲ್ಲಿ ಈ ಕೃತ್ಯ ನಡೆದಿದೆ ಎಂದು ವರದಿಯಾಗಿದೆ. ಮುನ್ನಾ ಮತ್ತು ಆತನ ಸಹಚರರು ಖಾಸಗಿ ಬಸ್ ಚಾಲಕನ ಮೇಲೆ ಯಾವುದೇ ಕಾರಣವಿಲ್ಲದೆ ಅಪ್ರಚೋದಿತ ಹಲ್ಲೆ ನಡೆಸುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಕೂಡಲೇ ನಝರಕ್ಕಲ್ ಪೊಲೀಸ್ ಠಾಣೆಯ ತಂಡವು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾಯಿತು.
ದಾಳಿಕೋರರಿಂದ ಬಸ್ ಸಿಬ್ಬಂದಿಯನ್ನು ರಕ್ಷಿಸಲು ಮತ್ತು ಆರೋಪಿಗಳನ್ನು ವಶಕ್ಕೆ ಪಡೆಯಲು ಯತ್ನಿಸುತ್ತಿದ್ದ ವೇಳೆ, ಆಕ್ರೋಶಗೊಂಡ ಗ್ಯಾಂಗ್ ಏಕಾಏಕಿ ಪೊಲೀಸರ ಮೇಲೆಯೇ ತಿರುಗಿಬಿದ್ದು ಚಾಕುವಿನಿಂದ ಎಸ್‌ಐ ಜಿತಿನ್ ಹಾಗೂ ಕಾನ್‌ಸ್ಟೆಬಲ್ ರಾಗೇಶ್ ಅವರಿಗೆ ಮನಬಂದಂತೆ ಇರಿದಿದೆ.




