February 4, 2026

ಉಪ್ಪಿನಂಗಡಿ: ಬೈಕ್‌ಗೆ ಪಿಕಪ್‌ ಢಿಕ್ಕಿ: ಬೈಕ್‌ ಸವಾರ ಸಾವು

0
image_editor_output_image1647739978-1720854918966.jpg

ಉಪ್ಪಿನಂಗಡಿ: ಬೈಕ್‌ ಹಾಗೂ ಪಿಕಪ್‌ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಬೈಕ್‌ ಸವಾರ ಸಾವನ್ನಪ್ಪಿದ ಘಟನೆ ಶುಕ್ರವಾರ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಕೊಣಾಲು ಗ್ರಾಮದ ಕೊಲ್ಪೆಯಲ್ಲಿ ನಡೆದಿದೆ.

ಮಂಗಳೂರು ಕೋಡಿಕ್ಕಲ್‌ ನಿವಾಸಿ ಪ್ರಣಮ್‌ ಕೋಟ್ಯಾನ್‌ (23) ಮೃತ ದುರ್ದೈವಿ.

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪ್ರಣಮ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇವರು ಮೆಡಿಕಲ್‌ ರೆಪ್‌ ಆಗಿದ್ದರು.

Leave a Reply

Your email address will not be published. Required fields are marked *

error: Content is protected !!