February 4, 2026

ಮರಕ್ಕೆ ಢಿಕ್ಕಿ ಹೊಡೆದ ಕಾರು: ಇಬ್ಬರು ಸ್ಥಳದಲ್ಲೇ ಮೃತ್ಯು

0
image_editor_output_image213999983-1720855117649.jpg

ಹಾವೇರಿ: ಹನುಮರಹಳ್ಳಿಯ ರಸ್ತೆಯಲ್ಲಿ ಮರಕ್ಕೆ ಕಾರೊಂದು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸವಣೂರು ತಾಲ್ಲೂಕಿನ ಬೇವಿನಹಳ್ಳಿಯ ನೀಲಪ್ಪ ಮೂಲಿಮನಿ (23) ಹಾಗೂ ಸುದೀಪ ಕೋಟಿ (19) ಮೃತರು.

ಬೇವಿನಹಳ್ಳಿಯ ಐವರು ಶನಿವಾರ ಬೆಳಿಗ್ಗೆ ತಮ್ಮೂರಿನಿಂದ ಕೆಲಸ ನಿಮಿತ್ತ ಬೆಳಗಾವಿ‌ ಜಿಲ್ಲೆಯ ಬೈಲಹೊಂಗಲಕ್ಕೆ‌ ಹೊರಟಿದ್ದರು. ಹನುಮರಹಳ್ಳಿಯ ಬಳಿ‌ ನಿಯಂತ್ರಣ ತಪ್ಪಿದ್ದ ಕಾರು, ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದಿದೆ. ನಂತರ, ಕಾರು ಉರುಳಿ ರಸ್ತೆ ಪಕ್ಕದ ‌ತಗ್ಗಿನಲ್ಲಿ ಬಿದ್ದಿದೆ ಎಂದು ಪೊಲೀಸರು ಹೇಳಿದರು.

ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಐವರು ತೀವ್ರ ಗಾಯಗೊಂಡಿದ್ದು, ಅವರನ್ನು ಶಿಗ್ಗಾವಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಸಂಬಂಧ ಶಿಗ್ಗಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!