ಹಟ್ಟಿ ಚಿನ್ನದಗಣಿಯಲ್ಲಿ ಮಣ್ಣು ಕುಸಿತ: ಓರ್ವ ಕಾರ್ಮಿಕ ಸಾವು, ಐವರು ಗಂಭೀರ
ರಾಯಚೂರು: ಹಟ್ಟಿ ಚಿನ್ನದಗಣಿಯಲ್ಲಿ ಮಣ್ಣು ಕುಸಿದ ಪರಿಣಾಮ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹಟ್ಟಿ ಚಿನ್ನದಗಣಿಯ ಕಂಪನಿಯ ಮಲ್ಲಪ್ಪ ಶಾಫ್ಟ್ ವಿಭಾಗದಲ್ಲಿ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಮಣ್ಣು ಕುಸಿದಿದೆ. ಪರಿಣಾಮ ಕಾರ್ಮಿಕ ಮೌನೇಶ್(50) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.




