May 5, 2026

ಶಿವಮೊಗ್ಗ | ಬೇಲಿ ಬಳಿ ಮೂತ್ರ ವಿಸರ್ಜನೆ ಮಾಡುವಾಗ ವಿದ್ಯುತ್ ಶಾಕ್: ಯುವಕ ಮೃತ್ಯು

0
image_editor_output_image-1643859770-1720761790937.jpg

ಶಿವಮೊಗ್ಗ: ವಿದ್ಯುತ್ ತಗುಲಿ ಯುವಕ ಸಾವನ್ನಪ್ಪಿದ ಘಟನೆ ರಿಪ್ಪನ್‌ಪೇಟೆಯ ಗವಟೂರಿನ ಹಳೂರು ಗ್ರಾಮದಲ್ಲಿ ನಡೆದಿದೆ.

ಕಾರ್ತಿಕ್ ಎಸ್ (19) ಮೃತಪಟ್ಟ ಯುವಕ. ಶುಕ್ರವಾರ ಬೆಳಗಿನಜಾವ ಮನೆ ಮುಂಭಾಗದಲ್ಲಿ ಘಟನೆ ನಡೆದಿದೆ.

ಮನೆ ಮುಂಭಾಗದ IBX ಬೇಲಿ ಬಳಿಯಲ್ಲಿ ಮೂತ್ರ ವಿಸರ್ಜನೆ ಮಾಡುವಾಗ ಕರೆಂಟ್ ಶಾಕ್ ಹೊಡೆದಿದೆ. ಮನೆ ಮುಂಭಾಗದ ಬೇಲಿ ಮೇಲೆ ವಿದ್ಯುತ್ ವೈರ್ ತುಂಡಾಗಿ ಬಿದ್ದಿತ್ತು. ಏಕಾಏಕಿ ವಿದ್ಯುತ್ ಪ್ರವಹಿಸಿ ಬೇಲಿಯ ಮೇಲೆ ಬಿದ್ದ ಯುವಕನನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದರೂ ಬದುಕುಳಿಯಲಿಲ್ಲ.

Leave a Reply

Your email address will not be published. Required fields are marked *

error: Content is protected !!