ವಿಟ್ಲ,; ಸ್ಪೈಸಿ ಹೊಟೇಲ್ ಇದರ ಸಭಾಂಗಣ ಉದ್ಘಾಟನೆ: BRIDE/GROOM TO BE, BIRTHDAY, ANNIVERSARIES
ವಿಟ್ಲ,; ಕಳೆದ ಹನ್ನೆರಡು ವರ್ಷಗಳಿಂದ ವಿಟ್ಲದ ಪುತ್ತೂರು ರಸ್ತೆಯ ರೀಹಾ ಪ್ಲಾನೇಟ್ ನಲ್ಲಿ ಕಾರ್ಯಾಚರಿಸುತ್ತಿರುವ “ಸ್ಪೈಸಿ ಹೊಟೇಲ್ ನವರ ನೂತನ ಸಭಾಂಗಣವನ್ನು ಇಬ್ರಾಹಿಂ ಮುಸ್ಲಿಯಾರ್ ಕೊಡಂಗಾಯಿ ಇವರು ಉದ್ಘಾಟಿಸಿದರು.
ವಿಟ್ಲ ಟೌನ್ ಮಸೀದಿ ಖತೀಬ್ ಅಬ್ಬಾಸ್ ಮದನಿ ದುವಾ ನೆರವೇರಿಸಿದರು
ಬಂಟ್ವಾಳ ತಾಲೂಕು ಜಂ ಇಯ್ಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ, ವಿಟ್ಲ ಡಿ’ ಗ್ರೂಪ್ ನ ಕಾರ್ಯದರ್ಶಿ ಶಾಕಿರ್ ಅಳಕೆಮಜಲು,ನಿಕಟ ಪೂರ್ವ ಅಧ್ಯಕ್ಷ ಖಲಂದರ್ ಪರ್ತಿಪ್ಪಾಡಿ,:ಜೊತೆ ಕಾರ್ಯದರ್ಶಿ ವಿ.ಕೆ.ಎಂ.ಹಂಝ,ಹಾಜಿ ಅಬ್ದುಲ್ ಸಲೀಂ ಬೈರಿಕಟ್ಟೆ,ಉಬೈದ್ ವಿಟ್ಲ ಬಝಾರ್, ಇಕ್ಬಾಲ್ ಶೀತಲ್, ಆರ್ .ಕೆ.ಅಬ್ದುಲ್ಲಾ ಹಾಜಿ,ನೌಶೀನ್ ಬದ್ರಿಯಾ, ಇರ್ಶಾದ್ ಸೆಲೆಕ್ಟ್,ದಾವೂದ್ ಒಕ್ಕೆತ್ತೂರು ಹರ್ಷದ್ ಕುಕ್ಕಿಲ ,ಸ್ಪೈಸಿ ಹೊಟೇಲ್ ಮಾಲಕರಾದ ಮಹಮ್ಮದ್ ಹನೀಫ್ ಪೆರ್ಲ,ಅಬ್ದುಲ್ ಅಝೀಝ್ ,ಅಬ್ದುಲ್ ಕರೀಮ್ ಮುಂತಾದವರು ಉಪಸ್ಥಿತರಿದ್ದರು.


ಪಾಲುದಾರರಾದ ಇರ್ಷಾದ್ ಸೆಲೆಕ್ಟ್ ಪ್ರಸ್ತಾವನೆ ಮಾಡಿ,ಸ್ಪೈಸಿ ಹೊಟೇಲ್ ವಿಟ್ಲ, ಪೆರ್ಲ,ಎರ್ನಾಕುಲಂ ಹಾಗೂ ಕಾಞಂಗಾಡ್ ನಲ್ಲಿ ಶಾಖೆಗಳನ್ನು ಹೊಂದಿದೆ.ಇದೀಗ ವಿಟ್ಲದಲ್ಲಿ ಪ್ರಾರಂಭಗೊಂಡ ಈ ಸಭಾಂಗಣದಲ್ಲಿ ಮದುವೆಯ ವಾರ್ಷಿಕೋತ್ಸವ, ಸೀಮಂತ,ಹುಟ್ಟುಹಬ್ಬ,ಮದರಂಗಿ ಹಾಗೂ ಮದುವೆಯ ಪೂರ್ವ ದಿನದ ಕಾರ್ಯಕ್ರಮಗಳಿಗೆ ಅವಕಾಶವಿದೆ.
ಹವಾನಿಯಂತ್ರಿತ ವ್ಯವಸ್ಥೆ, ಧ್ವನಿವರ್ಧಕ ಹಾಗೂ ವೇದಿಕೆಯ ವ್ಯವಸ್ಥೆಗಳಿದ್ದು ಗ್ರಾಹಕರು ಇದರ ಸದುಪಯೋಗ ಪಡೆಯುವಂತೆ ಮನವಿ ಮಾಡಿದರು.
ಇನ್ನೋರ್ವ ಪಾಲುದಾರ ರಾಝಿಕ್ ಕಿಸ್ವ ಸ್ವಾಗತಿಸಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬೂಬಕರ್ ಅನಿಲಕಟ್ಟೆ ಕಾರ್ಯಕ್ರಮ ನಿರೂಪಣೆ ಮಾಡಿದರು.







