ಬರೋಬ್ಬರಿ 50 ಜನರನ್ನು ಮದುವೆಯಾಗಿ ವಂಚಿಸಿದ್ದ ಖತರ್ನಾಕ್ ಮಹಿಳೆ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತೇ?
ತಮಿಳುನಾಡು: ಬರೋಬ್ಬರಿ 50 ಜನರನ್ನು ಮದುವೆಯಾಗಿ ವಂಚಿಸಿದ ಈ ಮಹಿಳೆ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.
ಈ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಇಲ್ಲಿನ ತಿರುಪುರದಲ್ಲಿನ 35 ವರ್ಷದ ಅವಿವಾಹಿತ ಯುವಕನೊಬ್ಬ ಆನ್‌ಲೈನ್ ಪ್ಲಾಟ್‌ಫಾರ್ಮ್ ʼದಿ ತಮಿಳು ವೇʼ ನಲ್ಲಿ ಪರಿಚಯವಾದ ಸಂಧ್ಯಾ (30) ಎಂಬ ಮಹಿಳೆಯನ್ನು ಕೆಲ ಸಮಯದ ಹಿಂದೆ ಮದುವೆಯಾಗಿದ್ದನು.
ಮದುವೆಯಾದ ಕೆಲ ದಿನಗಳ ಬಳಿಕ ಆಕೆಯ ವರ್ತನೆಯಲ್ಲಿ ತೀರಾ ಬದಲಾವಣೆ ಕಂಡು ಬಂದಿದ್ದು, ನಂತರ ಆತ ಸಂಧ್ಯಾಳ ಆಧಾರ್ ಕಾರ್ಡ್ ಪರಿಶೀಲಿಸಿದ್ದಾರೆ.
ಆಧಾರ್ ಕಾರ್ಡ್ ದಾಖಲೆಯಲ್ಲಿ ಸಂಧ್ಯಾಳ ಪತಿಯ ಹೆಸರು ಬೇರೆಯೇ ಇದೆ. ತನಗೆ ವಂಚನೆ ಮಾಡಿದ್ದಾಳೆ ಎಂದು ತಿಳಿದ ಈ ಯುವಕ ಸೀದಾ ಹೋಗಿ ತಾರಾಪುರಂ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾನೆ.




