March 19, 2026

ಮಂಗಳೂರು: ಶಾಸಕ ಭರತ್ ಶೆಟ್ಟಿ ವಿರುದ್ಧ ವಿಟ್ಲ ಪೊಲೀಸ್ ಠಾಣೆಗೆ ಕಾಂಗ್ರೆಸ್ ದೂರು

0
IMG-20240710-WA0001.jpg

ವಿಟ್ಲ: ಮಂಗಳೂರು ಶಾಸಕ ಭರತ್ ಶೆಟ್ಟಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಗ್ಗೆ ಅವಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಪ್ರಚೋದನೆ ಮಾಡಿದ್ದು, ಅವರು ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವಿಟ್ಲ ಪೊಲೀಸ್ ಠಾಣೆಗೆ ಕಾಂಗ್ರೆಸ್ ನಿಯೋಗ ಮನವಿ ಸಲ್ಲಿಸಿದೆ.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್ ಅವರ ನೇತೃತ್ವದಲ್ಲಿ ಠಾಣೆಗೆ ತೆರಳಿದ ನಿಯೋಗ ವಿಟ್ಲ ಪೊಲೀಸ್ ಇನ್‌ಸ್ಪೆಕ್ಟರ್ ನಾಗರಾಜ್ ಎಚ್.ಇ ಅವರಿಗೆ ದೂರು ಸಲ್ಲಿಸಿದೆ. ಶಾಸಕ ಭರತ್ ಶೆಟ್ಟಿಯವರು ರಾಹುಲ್ ಗಾಂಧಿಯವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾನಹಾನಿ ಮಾಡಿರುತ್ತಾರೆ. ಅವರು ಕಪಾಲಕ್ಕೆ ಹೊಡಿಬೇಕು ಎಂದು ಸಾರ್ವಜನಿಕವಾಗಿ ಕರೆ ನೀಡಿದ್ದಾರೆ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಪ್ರವೀಣ್ ಚಂದ್ರ ಆಳ್ವ, ಮುರಳೀಧರ ರೈ ಮಠಂತಬೆಟ್ಟು, ರಮಾನಾಥ ವಿಟ್ಲ, ಪಟ್ಟಣ ಪಂಚಾಯಿತಿ ಸದಸ್ಯರಾದ ಲತಾವೇಣಿ, ಪದ್ಮಿನಿ, ನಾಮನಿರ್ದೇಶಕ ಸದಸ್ಯ ಶ್ರೀನಿವಾಸ ಶೆಟ್ಟಿ ಕೊಲ್ಯ, ಪ್ರಮುಖರಾದ ಮೋಹನ ಗುರ್ಜಿನಡ್ಕ, ಎಲ್ಯಣ್ಣ ಪೂಜಾರಿ, ಕರೀಮ್ ಕುದ್ದುಪದವು, ಸಿರಾಜ್ ಮಣಿಲ, ಅಶೋಕ್ ಎನ್ ಎಸ್ ಡಿ, ಸುಲೈಮಾನ್ ಒಕ್ಕೆತ್ತೂರು, ವಿಕೆಎಂ ಹಂಝ, ಎಸ್ ಕೆ ಮೊಹಮ್ಮದ್, ಗಂಗಾಧರ್ ಕನ್ಯಾನ, ಜೋನಿ ವಿಟ್ಲ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!