ರಕ್ತದ ಅವಶ್ಯಕತೆ ಇದ್ದವರು ನಮ್ಮ ಸಂಘಟನೆಯನ್ನ ಸಂಪರ್ಕಿಸಿ: ಒಳಿತು ಮಾಡು ಮನುಷ್ಯ ಸಾಮಾಜಿಕ ಸೇವಾ ಸಂಘಟನೆ
ಬೆಂಗಳೂರು: ಒಳಿತು ಮಾಡು ಮನುಷ್ಯ ಎಜುಕೇಷನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ 6ನೇ ತಾರೀಖು ಬೃಹತ್ ರಕ್ತದಾನ ಶಿಬಿರ ಮತ್ತು ಉಚಿತ ನೇತ್ರ ತಪಾಸಣೆ ಶಿಬಿರವನ್ನು ಜಯನಗರದಲ್ಲಿ ಆಯೋಜಿಸಿದ್ದಾರೆ. ಇದರ ಕುರಿತು ಮಾಧ್ಯಮಗೋಷ್ಟಿ ಏರ್ಪಡಿಸಿದ್ದರು.
ಪತ್ರಿಕಾ ಗೋಷ್ಠಿಯಲ್ಲಿ ಶಾನ್ ಪುತ್ತೂರು (ಒಳಿತು ಮಾಡು ಮನುಷ್ಯ ಸ್ಥಾಪಕರು) ಅಶ್ರಪ್ ಅರಬಿ ಕಲ್ಲಡ್ಕ, ಕೆ.ಮಂಜುನಾಥ (ಕರ್ನಾಟಕ ರಕ್ಷಣಾ ವೇದಿಕೆ ವೀರಘರ್ಜನೆ ಕನ್ನಡಿಗ) ಅಬ್ದುಲ್ ರಹಿಮಾನ್ ಪಿ.ಯಮ್.(ಗೌರವ ಅಧ್ಯಕ್ಷರು ಒಳಿತು ಮಾಡು ಮನುಷ್ಯ) ಮುಬಾರಕ್ (ಒಳಿತು ಮಾಡು ಮನುಷ್ಯ ರಾಜ್ಯ ಪ್ರಧಾನ ಕಾರ್ಯದರ್ಶಿ) ಭಾಗವಹಿಸಿದ್ದರು.
ರಾಜ್ಯದಲ್ಲಿ ಪ್ರತಿದಿನ ಸಾವಿರಾರು ಯೂನಿಟ್ ರಕ್ತ ಬೇಕು, ಅಪಘಾತ, ಅಪರೇಷನ್ ಮಾಡುವ ಸಂದರ್ಭ ಮತ್ತು ಡೆಂಗ್ಯೂ ಜ್ವರಕ್ಕೆ ರಕ್ತದ ಅವಶ್ಯಕತೆ ಇದೆ. ಬೆಂಗಳೂರು ನಗರ ಸಾರ್ವಜನಿಕರು ತುರ್ತು ರಕ್ತದ ಅವಶ್ಯಕತೆ ಇದ್ದಲ್ಲಿ ನಮ್ಮಲ್ಲಿ ಸಂಪರ್ಕಿಸಿದರು ದಾನಿಗಳಿಂದ ರಕ್ತ ಲಭಿಸುವಂತೆ ಮಾಡಲಾಗುತ್ತದೆ.
ರಕ್ತದಾನದ ಮಹತ್ವ ಅರಿವು ಮೂಡಿಸಬೇಕು ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಆರೋಗ್ಯವಂತ ಪ್ರತಿಯೊಬ್ಬರು ರಕ್ತದಾನ ಮಾಡಿ, ಮೂರು ತಿಂಗಳಿಗೆ ಒಮ್ಮೆ ರಕ್ತದಾನ ಮಾಡಬಹುದು. ರಕ್ತದಾನ ಮಾಡುವುದರಿಂದ ಹೊಸ ರಕ್ತಕಣ ಉತ್ಪತ್ತಿಯಾಗುವುದರಿಂದ ಆರೋಗ್ಯವಂತರಾಗಿ ಇರಬಹುದು.




