ಎಸ್ಎಂಎ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸಮಿತಿ: ಮೊಹಲ್ಲಾ ಪ್ರತಿನಿಧಿ ಸಮಾವೇಶ ಹಾಗೂ ಮರ್ಹೂಂ ಸಾದಾತ್ ತಂಙಳ್ ಅನುಸ್ಮರಣೆ
ವಿಟ್ಲ : ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಎಸ್ ಎಂ ಎ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸಮಿತಿ ವತಿಯಿಂದ ಜುಲೈ 3 ಬುಧವಾರ ಬೆಳಿಗ್ಗೆ ಜನಪ್ರಿಯ ಗಾರ್ಡನ್ ನೆರಳಕಟ್ಟೆ ಯಲ್ಲಿ ಜಿಲ್ಲಾ ಪ್ರತಿನಿಧಿ ಸಮಾವೇಶ ಹಾಗೂ ಕರ್ವೇಲ್ ಸಾದಾತ್ ತಂಙಳ್ ಅನುಸ್ಮರಣೆ ಜರಗಿತ್ತು
ಕಾರ್ಯಕ್ರಮದಲ್ಲಿ ಎಸ್ ಎಂಎ ರಾಜ್ಯ ಅಧ್ಯಕ್ಷರಾದ ಇಸ್ಮಾಯಿಲ್ ತಂಙಳ್ ಉಜಿರೆ ಪ್ರಾರ್ಥನೆ ನಡೆಸಿದರು ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ಯೂಸುಫ್ ಸಾಜ ವಹಿಸಿದರು. ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಕಬಕ ಅತಿಥಿಗಳನ್ನು ಸ್ವಾಗತಿಸಿದರು.
ಪ್ರಾಸ್ತಾವಿಕವಾಗಿ ಎಸ್ ಎಂ ಎ ರಾಜ್ಯ ಕೋಶಾಧಿಕಾರಿ ಹಾಜಿ ಹಮೀದ್ ಕೊಡುಂಗಾಯಿ ಮಾತನಾಡಿ ಮಸೀದಿ ಮದರಸಗಳಲ್ಲಿ ಮಾರಕಸ್ತ್ರಗಳಿವೆ ಎಂದು ಸುಳ್ಳು ಹೇಳಿ ಪರಸ್ಪರ ಕೋಮು ಭಾವನೆ ಕೆರಳಿಸುವ ಬೆಳ್ತಂಗಡಿ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಮಾತ್ರವಲ್ಲ ಮುಸ್ಲಿಮರಿಗೆ ರಕ್ಷಣೆ ನೀಡುವ ಜವಾಬ್ದಾರಿ ಸರಕಾರಕ್ಕಿದೆ ಕಳೆದ ಸರ್ಕಾರ ರದ್ದುಗೊಳಿಸಿದ ಅಲ್ಪಸಂಖ್ಯಾತರ ಮೀಸಲಾತಿ ಹಾಗೂ ಹಲವು ಯೋಜನೆಗಳನ್ನು ಸರ್ಕಾರ ಮರು ನೀಡಬೇಕು ಯಾವುದೇ ಪ್ರಕರಣದಲ್ಲಿ ಅಮಾಯಕರ ಬಂಧನ ಸರಿಯಲ್ಲ ಪೊಲೀಸ್ ಇಲಾಖೆ ಈ ಬಗ್ಗೆ ಪರಿಶೀಲಿಸಿ ಅಮಾಯಕರನ್ನು ಬಿಡುಗಡೆಗೊಳಿಸಬೇಕುಎಂದು ಒತ್ತಾಯಿಸಿದರು.
ಮದರಸ ಮಸೀದಿಗಳ ಸಬಲೀಕರಣಕ್ಕಾಗಿ ಎಸ್ಎಂಎ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಹುಸೈನ್ ಸಅದಿ ಕೆಸಿ ರೋಡ್ ನಿರ್ವಹಿಸಿದರು , ಖ್ಯಾತ ವಾಗ್ಮಿ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ
ಅಬೂ ಸುಫ್‌ಯಾನ್ ಇಬ್ರಾಹಿಂ ಮದನಿ ವಿಷಯ ಮಂಡನೆ ನಡೆಸಿ ಮೊಹಲ್ಲಾಗಳಲ್ಲಿ ಪರಿವರ್ತನೆ ಮಾಡುವುದರ ಮೂಲಕ ಎಸ್ ಎಂ ಎ ಕಾರ್ಯಚರಿಸುತ್ತಿರುವುದು ಶ್ಲಾಘನೀಯ . ಮೊಹಲ್ಲಾ ಆಡಳಿತ ಸಮಿತಿ ತಿಳಿದಿರಬೇಕಾದ ಹತ್ತು ಹಲವು ವಿಷಯಗಳ ಬಗ್ಗೆ ಸವಿವರವಾಗಿ ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಸಯ್ಯಿದ್ ಶಿಹಾಬುದ್ದೀನ್ ತಂಙಳ ಮದಕ,ರಾಜ್ಯ ಎಸ್ ಎಂ ಎ ಉಪಾಧ್ಯಕ್ಷರಾದ ಖಾದರ ಹಾಜಿ ಜಿಲ್ಲಾ, ಝೋನಲ್ ನಾಯಕರಾದ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಇಬ್ರಾಹಿಂ ಬೀಡು ಬೆಳ್ಳಾರೆ, ಹಮೀದ್ ಮುಂಡಾಜೆ ಇಸ್ಮಾಯಿಲ್ ಹಾಜಿ ಬನ್ನೂರು ಇಸ್ಮಾಯಿಲ್ ಉಳ್ತೂರು ,ಇಬ್ರಾಹಿಂ ಸಹದಿ ನೆಕ್ಕಿಲಾಡಿ, ಅಬ್ಬಾಸ್ ಬಟ್ಲಡ್ಕ, ಅಬ್ದುಲ್ ಲತೀಫ್ ಹರ್ಲಡ್ಕ ಸುಳ್ಯ, ಅಬ್ದುಲ್ ಅಹ್ಸನಿ ಮಾಡನ್ನೂರು, ಅಶ್ರಫ್ ಹಿಮಮಿ , ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ, ಹಲವಾರು ಉಲಮಾ,ಉಮರಾ ನಾಯಕರು ಭಾಗವಹಿಸಿದ್ದರು.ಸಭೆಯ ಕೊನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಅಬ್ಬಾಸ್ ಬಟ್ಲಡ್ಕ ರವರು ಠರಾವು ಮಂಡಿಸಿದರು
ಕಾರ್ಯಕ್ರಮದಲ್ಲಿ ಮೊಹಲ್ಲಾಗಳಿಂದ ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು ಸಭೆಯ ಕೊನೆಯಲ್ಲಿ ಕರ್ವೇಲ್ ಸಾದಾತ್ ತಂಙಳ್ ರವರ ಹೆಸರಿನಲ್ಲಿ ತಹ್ಲೀಲ್ ಸಮರ್ಪಣೆ ನಡೆಸಲಾಯಿತು
ಸ್ವಾಗತ ಸಮಿತಿ ಕನ್ವೀನರ್ ಕಾಸಿಂ ಸಖಾಫಿ ಧನ್ಯವಾದ ಮಾಡಿದವರು SMA ವಿಟ್ಲ ಝೋನ್ ಸಂಘಟನಾ ಕಾರ್ಯದರ್ಶಿ ಹಾರಿಸ್ ಮದನಿ ಕಾರ್ಯಕ್ರಮ ನಿರೋಪಿಸಿದರು





