March 17, 2026

“ಕ್ಷಮಿಸಿ ನಾನು ಕದ್ದಿರುವ ಚಿನ್ನಾಭರಣಗಳನ್ನು ತಿಂಗಳೊಳಗೆ ಹಿಂತಿರುಗಿಸುವೆ” ಪತ್ರ ಬರೆದಿಟ್ಟು ಕಳವು

0
image_editor_output_image-710531540-1720080149122.jpg

ತಮಿಳುನಾಡು: ರಾಜ್ಯದಲ್ಲಿ ವಿಚಿತ್ರ ಕಳ್ಳತನ ಪ್ರಕರಣವೊಂದು ನಡೆದಿರುವುದು ಬೆಳಕಿಗೆ ಬಂದಿದೆ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬಾಗಿಲು ಮುರಿದು ಕಳ್ಳತನ ನಡೆಸಿರುವ ಘಟನೆ ತಮಿಳುನಾಡಿನ ಮೆಗ್ನಾನಪುರಂನ ಸಾತಾಂಕುಳಂ ಪ್ರದೇಶದಲ್ಲಿ ನಡೆದಿದೆ.

ಕಳ್ಳತನ ನಡೆಸಿರುವ ಕಳ್ಳ ಮನೆಯವರಿಗೆ ಪತ್ರವೊಂದನ್ನು ಬರೆದಿದ್ದಾನೆ, ಕ್ಷಮಿಸಿ ನಾನು ಕದ್ದಿರುವ ವಸ್ತುಗಳನ್ನು ಒಂದು ತಿಂಗಳೊಳಗೆ ಹಿಂತಿರುಗಿಸುವೆ ನನ್ನನು ಹುಡುಕುವ ಪ್ರಯತ್ನ ಮಾಡಬೇಡಿ ಅಲ್ಲದೆ ಪೊಲೀಸರಿಗೆ ದೂರು ನೀಡಬೇಡಿ ನನ್ನ ಮನೆಯಲ್ಲಿರುವ ಸಮಸ್ಯೆಯಿಂದ ನಾನು ಈ ನಿರ್ಧಾರಕ್ಕೆ ಬಂದಿರುವುದಾಗಿ ಬರೆದುಕೊಂಡಿದ್ದಾನೆ.

60 ಸಾವಿರ ರೂ., 12 ಗ್ರಾಂ ಚಿನ್ನಾಭರಣ ಹಾಗೂ ಒಂದು ಜೊತೆ ಬೆಳ್ಳಿಯ ಕಾಲುಂಗುರ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ಘಟನೆ ಸಂಬಂಧ ಮೆಗ್ನಾನಾಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!