ಟಿ20 ವಿಶ್ವಕಪ್ ಕಿರೀಟ ಗೆದ್ದ ಬೆನ್ನಲ್ಲೇ ಭಾರತದ ಇಬ್ಬರು ಶ್ರೇಷ್ಠ ಕ್ರಿಕೆಟಿಗರು T20ಗೆ ವಿದಾಯ

ನವದೆಹಲಿ: ಸುದೀರ್ಘ 17 ವರ್ಷಗಳ ಬಳಿಕ ಟೀಂ ಇಂಡಿಯಾ ಟಿ20 ವಿಶ್ವಕಪ್ ಕಿರೀಟ ಗೆದ್ದ ಬೆನ್ನಲ್ಲೇ ಭಾರತದ ಇಬ್ಬರು ಶ್ರೇಷ್ಠ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಶನಿವಾರ T20I ನಿವೃತ್ತಿ ಘೋಷಿಸಿದ್ದಾರೆ.
ಐತಿಹಾಸಿಕ ವಿಜಯದ ನಂತರ ಕೊಹ್ಲಿ ತಮ್ಮ ನಿವೃತ್ತಿಯನ್ನು ಘೋಷಿಸಿದರೆ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಪಂದ್ಯದ ನಂತರದ ಅಧಿಕೃತ ಪತ್ರಿಕಾಗೋಷ್ಠಿಯಲ್ಲಿ ನಿವೃತ್ತಿ ಘೋಷಿಸಿದರು.
ಭಾರತದ ವಿಜಯೋತ್ಸವದ ಅಭಿಯಾನದಲ್ಲಿ ನಿರ್ಣಾಯಕ ಪಾತ್ರ ವಹಿಸಿದ ರೋಹಿತ್, ಏಕದಿನ ಮತ್ತು ಟೆಸ್ಟ್‌ಗಳಲ್ಲಿ ಭಾರತ ತಂಡ ಪ್ರತಿನಿಧಿಸುವುದನ್ನು ಮುಂದುವರಿಸುವುದಾಗಿ ಖಚಿತಪಡಿಸಿದರು. ಟಿ20 ವಿಶ್ವಕಪ್ ಟ್ರೋಫಿಯನ್ನು ಭಾರತದ ಮಡಿಲಿಗಿಟ್ಟು ಇಬ್ಬರೂ ಕ್ರಿಕೆಟಿಗರು ವಿದಾಯ ಹೇಳಿದ್ದಾರೆ.