ಮಲಗಿದ ಯುವಕನ ಚಡ್ಡಿಯಲ್ಲಿ ಅವಿತು ಕುಳಿತ ನಾಗರ ಹಾವು: ಮುಂದೇನಾಯ್ತು ಗೊತ್ತೇ?
ಮಳೆಗಾಲದಲ್ಲಿ ಹಾವುಗಳು ಮನೆಯೊಳಗೆ ಅಥವಾ ಮನೆ ಅಕ್ಕ ಪಕ್ಕದಲ್ಲಿನ ಪೊದೆಗಳಲ್ಲಿ ಅವಿತು ಕುಳಿತುಕೊಳ್ಳುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ ಇಲ್ಲೊಂದು ಹಾವು ಮಲಗಿದ್ದವನ ಚಡ್ಡಿಯೊಳಗೆಯೇ ಅವಿತು ಕುಳಿತುಬಿಟ್ಟಿದೆ.
ಮಲಗಿದ ಯುವಕನ ಚಡ್ಡಿಯೊಳಗೆಯೇ ಅವಿತು ಕುಳಿತಿತ್ತು, ಸದ್ಯ ಬಹಳ ಜೋಪಾನವಾಗಿ ಅವಿತು ಕುಳಿತ ಹಾವನ್ನು ಹೊರತೆಗೆಯಲಾಗಿದ್ದು, ಈ ಕುರಿತ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
ಈ ಹಾವು ಎಂದರೆ ಸಾಕು ಎಂಥ ಧೈರ್ಯವಂತ ಮನುಷ್ಯನಿಗಾದರೂ ಮಾರುದ್ಧ ಜಿಗಿಯೋದು ಗ್ಯಾರಂಟಿ. ಒಂದು ವೇಳೆ ಮನೆಯೊಳಗೆ ಹಾವು ಬಂದರೆ ನಾವು ಅಲ್ಲಿಂದ ಕಾಲ್ಕಿತ್ತು ಬಿಡುತ್ತೇವೆ. ಅಂತದ್ರಲ್ಲಿ ಇಲ್ಲೊಬ್ಬ ಯುವಕನ ಚಡ್ಡಿಯೊಳಗೆಯೇ ಹಾವೊಂದು ಅವಿತು ಕುಳಿತು, ದೊಡ್ಡ ಅವಾಂತರವನ್ನೇ ಸೃಷ್ಟಿಸಿದೆ.
ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ. ಈ ಘಟನೆ ಥೈಲ್ಯಾಂಡ್‌ನ ಪೂರ್ವ ಪ್ರಾಂತ್ಯದ ರೇಯಾಂಗ್ ಎಂಬಲ್ಲಿ ನಡೆದಿದ್ದು, ಮನೆಯಲ್ಲಿ ಮಂಚದ ಮೇಲೆ ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದ ಯುವಕನ ಬಳಿ ಬಂದ ಹಾವೊಂದು ಸೀದಾ ಹೋಗಿ ಆತನ ಬಾಕ್ಸರ್ ಶಾರ್ಟ್ಸ್‌ಗೆ (ಚಡ್ಡಿ) ಯೊಳಗೆ ನಾಗರ ಹಾವು ಸೇರಿ ಬಿಟ್ಟಿದೆ.
ಆತನ ಚಡ್ಡಿಯೊಳಗೆ ಸಣ್ಣ ಗಾತ್ರದ ನಾಗರ ಹಾವು ಸೇರಿಕೊಂಡ ಕಾರಣ ಆತ ಯಾವುದೇ ಕಾರಣಕ್ಕೂ ಒಂದಿಷ್ಟು ಅಲುಗಾಡದೆ ಮಲಗಿರುತ್ತಾನೆ. ಬಳಿಕ ಉರಗ ತಜ್ಞರು ಬಂದು ಯುವಕನಿಗೆ ಯಾವುದೇ ಅಪಾಯವಾಗದಂತೆ ಸ್ನೇಕ್ ಹುಕ್ ಸಹಾಯದಿಂದ ಹಾವನ್ನು ಜೋಪಾನವಾಗಿ ಹೊರ ತೆಗೆದಿದ್ದಾರೆ.
ಕೇವಲ 5 ದಿನಗಳ ಹಿಂದೆಷ್ಟೆ ಹಂಚಿಕೊಳ್ಳಲಾದ ಈ ವಿಡಿಯೋ 77,488 likes ಪಡೆದುಕೊಂಡಿದ್ದು, ಹಾವಿಗೆ ಅವಿತುಕೊಳ್ಳಲು ಬೇರೆ ಯಾವ ಸ್ಥಳವೂ ಸಿಗಲಿಲ್ಲವೇ ಎಂದು ನೆಟ್ಟಿಗರು ತಮಾಷೆಯ ಕಾಮೆಂಟ್ಸ್‌ಗಳನ್ನು ಬರೆದುಕೊಂಡಿದ್ದಾರೆ.





