May 6, 2026

ಪವಿತ್ರಾಗೆ 5 ತಿಂಗಳಿಂದ ಮೆಸೇಜ್ ಮಾಡುತ್ತಿದ್ದ ರೇಣುಕಾಸ್ವಾಮಿ

0
image_editor_output_image1672409651-1719643746218.jpg

ಬೆಂಗಳೂರು: ಸ್ಯಾಂಡಲ್‍ವುಡ್ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಗ್ಯಾಂಗ್‍ನಿಂದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪವಿತ್ರಾ ಗೌಡಗೆ ಮೆಸೇಜ್ ಮಾಡ್ತಿದ್ದ ರಹಸ್ಯ ಬಯಲಾಗಿದೆ.

ಮೃತ ರೇಣುಕಾಸ್ವಾಮಿ ಕಳೆದ 5 ತಿಂಗಳಿಂದ ಪವಿತ್ರಾಗೆ ಮೆಸೇಜ್ ಮಾಡುತ್ತಿದ್ದರು. ಫೆಬ್ರವರಿಯಿಂದ ಸುಮಾರು 200ಕ್ಕೂ ಹೆಚ್ಚು ಮೆಸೇಜ್ ಬಂದಿದ್ದು, ಎಲ್ಲ ಮೆಸೇಜ್‍ಗಳು ಕೂಡ ಅಶ್ಲೀಲ ಮೆಸೇಜ್‍ಗಳಾಗಿವೆ ಎಂಬುದು ತನಿಖೆ ವೇಳೆ ಬಯಲಾಗಿದೆ.

ರೇಣುಕಾಸ್ವಾಮಿ ಅಷ್ಟು ಮೆಸೇಜ್ ಮಾಡಿದ್ದರೂ ಪವಿತ್ರಾ ಗೌಡ ಮಾತ್ರ ರಿಪ್ಲೈ ಮಾಡಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ರೇಣುಕಾಸ್ವಾಮಿ ಮೆಸೇಜ್ ಜೊತೆ ಅಶ್ಲೀಲ ಫೋಟೋ ಕೂಡ ರವಾನೆ ಮಾಡಿದ್ದಾರೆ.

ಇದರಿಂದ ಕೋಪಗೊಂಡ ಪವಿತ್ರಾ ಗೌಡ ಈ ವಿಷಯವನ್ನು ಪವನ್‍ಗೆ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!