ಸುರತ್ಕಲ್: ರಸ್ತೆಯ ಗುಂಡಿಗೆ ಬಿದ್ದು ಸ್ಕೂಟರ್ ಸವಾರನಿಗೆ ಗಾಯ
ಸುರತ್ಕಲ್: ಸ್ಕೂಟರ್ ಸವಾರನೊಬ್ಬ ರಸ್ತೆಯ ಗುಂಡಿಗೆ ಬಿದ್ದು ಗಾಯಗೊಂಡ ಘಟನೆ ನಡೆದಿದೆ.
ತಕ್ಷಣ ಆಕ್ರೋಶಗೊಂಡ ಸವಾರ ಗುಂಡಿಯಲ್ಲಿ ವಾಹನ ನಿಲ್ಲಿಸಿ ಪ್ರತಿಭಟನೆ ನಡೆಸಿದ್ದಾರೆ.
ಅರೆಬರೆ ಕಾಂಕ್ರಿಟ್ ಹಾಕಿದ ಸುರತ್ಕಲ್ ಹೆದ್ದಾರಿ ಜಂಕ್ಷನ್ ನಲ್ಲಿ ಮಳೆಗೆ ಮರಣ ಗುಂಡಿ ನಿರ್ಮಾಣವಾಗಿದೆ. ಎಲ್ಲರೂ ಹೊಂಡ ನೋಡಿ ಹೋಗುವವರೇ ಹೆಚ್ಚು. ಆದರೆ ಈ ಗಾಯಾಳು ತಕ್ಷಣ ವಾಹನ ನಿಲ್ಲಿಸಿ ಪ್ರತಿಭಟಿಸಿದ್ದಲ್ಲದೇ ಇತರ ವಾಹನ ಸವಾರರನ್ನೂ ಎಚ್ಚರಿಸುವ ಕೆಲಸ ಮಾಡಿದ್ದಾರೆ.





