ನೀರಿನಲ್ಲಿ ಮುಳುಗಿ ಹೋದ ಮಲೆನಾಡು ಹೈವೆ
ಮಂಜೇಶ್ವರ: ಇಲ್ಲಿನ ವಿದ್ಯಾನಗರ – ನಂದರಪದವು ಮಲೆನಾಡು ಹೈವೆ ಹಾದುಹೋಗುವ ವರ್ಕಾಡಿ ಸುಂಕದಕಟ್ಟೆ ಜಂಕ್ಷನ್ ಸಮೀಪದ ಬಸ್ಸು ನಿಲ್ದಾಣದ ಸಮೀಪ ಡೈನೇಜ್ ಬ್ಲಾಕ್ ಆಗಿದ್ದು ಇದೀಗ ಹೊಸ್ಸಂಗಡಿ ಕಡೆ ಪ್ರಯಾಣಿಸುವ ಪ್ರಯಾಣಿಕರು ಈ ಕೊಳಚೆ ನೀರಿನಿಂದ ಭಾರೀ ಸಂಕಷ್ಟಕ್ಕಿಡಾಗಿದ್ದಾರೆ.
ವರ್ಕಾಡಿ ಪಂಚಾಯತ್ ಸಮೀಪದಲ್ಲೇ ಈ ಬಸ್ ನಿಲ್ದಾಣವಿದ್ದು ಈ ಅನಾಸ್ಥೆಯನ್ನು ಕಂಡು ಕೆಲವು ಅಧಿಕೃತರು ಕಣ್ಣಿದ್ದು ಕುರುಡರಂತೆ ನಟಿಸುತ್ತಿರುವುದಾಗಿ ಪ್ರಯಾಣಿಕರು ಆರೋಪಿಸಿದ್ದಾರೆ.
ಮಲೆನಾಡು ಹೆದ್ದಾರಿಯ ಕಾಮಾಗಾರಿಯನ್ನು ಖಾಸಗಿ ಕಂಪೆನಿ ನಡೆಸಿದ್ದು, ಕಳಪೆ ಕಾಮಾಗಾರಿಯೇ ಈ ದುಸ್ಥಿತಿಗೆ ಕಾರಣ ಎನ್ನಲಾಗಿದೆ. ಈ ಬಸ್ ನಿಲ್ದಾಣದ ಮೂಲಕ ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಮಹಿಳೆಯರು ಪ್ರಯಾಣಿಸುತ್ತಿದ್ದು ಭಾರೀ ತೊಂದರೆಗೊಳಗಾಗುತ್ತಿದ್ದು, ಈ ಬಸ್ ನಿಲ್ದಾಣದ ಸಮೀಪ ವರ್ಕಾಡಿ ಪಂ ಕಚೇರಿ,
ಮ್ರಗಾಸ್ಪತ್ರೆ, ಕೃಷಿ ಕಚೇರಿ ಕಾರ್ಯಚರಿಸುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳೂ ಕೂಡಲೇ ಈ ಚರಂಡಿ ವ್ಯವಸ್ಥೆಯನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕೆಂದು ನಾಗರೀಕರು ಒತ್ತಾಯಿಸಿದ್ದಾರೆ