ಕಾಸರಗೋಡು: ಹಿಟಾಟಿ ಯಂತ್ರ ಪಲ್ಟಿ: ಯುವಕ ಸಾವು

ಕಾಸರಗೋಡು: ಮನೆಯ ಅಂಗಳದಲ್ಲಿ ಹಿಟಾಚಿ ತೊಳೆಯುವ ವೇಳೆ ಪಲ್ಟಿಯಾಗಿ ಯುವಕನೊಬ್ಬ ಸಾವನಪ್ಪಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.
ಮೃತ ಯುವಕನನ್ನು ಕಾಸರಗೋಡು ಮಹಿಳಾ ಕಾಂಗ್ರೇಸ್ ನ ಜಿಲ್ಲಾಧ್ಯಕ್ಷೆ ಮಿನಿ ಚಂದ್ರನ್ ಅವರ ಪುತ್ರ ಪ್ರೀತಂ ಲಾಲ್ ಚಂದ್ ಎಂದು ಗುರುತಿಸಲಾಗಿದೆ.
ಮಂಗಳವಾರ ಬೆಳಗ್ಗೆ ಪ್ರೀತಂ ಲಾಲ್ ತನ್ನ ಅಜ್ಜಿಯ ಮನೆಯಲ್ಲಿ ಹಿಟಾಟಿಯನ್ನು ತೊಳೆಯುತ್ತಿದ್ದಾಗ ಯಂತ್ರ ಪಲ್ಟಿಯಾಗಿದೆ.
ಈ ವೇಳೆ ಪ್ರೀತಂ ಹಿಟಾಚಿ ಅಡಿ ಸಿಕ್ಕಿ ಬಿದ್ದಿದ್ದಾನೆ. ಹಿಟಾಚಿಯನ್ನು ಮೇಲೆತ್ತಿ ಅವನನ್ನು ಹೊರತೆಗೆಯಲು ನಮಗೆ ಬಹಳ ಸಮಯ ಹಿಡಿದಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋದರು ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ.