July 3, 2026

ಕಾಡಾನೆ ಮುಂದೆ REELS ಮಾಡಲು ಹೋಗಿ ಸಾವನ್ನಪ್ಪಿದ ಯುವಕ

0
image_editor_output_image2146584161-1718433374979.jpg

ಬಿಜ್ನೋರ್: ಕಾಡಾನೆ ಮುಂದೆ ರೀಲ್ಸ್ ಮಾಡಲು ಹೋಗಿ ಯುವಕನೋರ್ವ ಬಲಿಯಾದ ಘಟನೆ ಉತ್ತರ ಪ್ರದೇಶದ ಬಿಜ್ನೋರ್‌ನ ಧಮ್ಪುರ್ ಪ್ರದೇಶದಲ್ಲಿ ನಡೆದಿದೆ.

ಮೃತ ಯುವಕನನ್ನು ಬಾಗ್ದಾದ್ ಅನ್ಸಾರಿ ಗ್ರಾಮದ ನಿವಾಸಿ ಮುಹಮ್ಮದ್ ಮುರ್ಶ್ಲೀನ್ (24) ಎಂದು ಗುರುತಿಸಲಾಗಿದೆ.

ಬಿಜ್ನೋರ್‌ನ ಧಮ್ಪುರ್ ಅರಣ್ಯ ವಲಯದ ಬಳಿ ಕಾನಿನಿಂದ ಬಂದ ಪುಂಡಾನೆಯೊಂದು ಘೀಳಿಡುತ್ತಾ ಬರುತ್ತಿರುವ ಸದ್ದನ್ನು ಕೇಳಿ ಮುಹಮ್ಮದ್ ಮುರ್ಶ್ಲೀನ್ ತನ್ನ ಗೆಳೆಯರೊಂದಿಗೆ ಮನೆಯಿಂದ ಹೊರಗೆ ಬಂದಿದ್ದನು.

ಕಾಡಾನೆಯನ್ನು ಕಂಡ ಆತ ಅದರ ರೀಲ್ ಮಾಡಲು ಪ್ರಾರಂಭಿಸಿದನು. ಆತನನನ್ನು ನೋಡಿದ ಕಾಡಾನೆ ಕ್ಷಣ ಮಾತ್ರದಲ್ಲಿ ಆತನತ್ತ ಧಾವಿಸಿ ದಾಳಿ ನಡೆಸಿ ತನ್ನ ಸೊಂಡಿಲಿನಿಂದ ಆತನನ್ನು ಮೇಲೆತ್ತಿ, ನೆಲಕ್ಕೆ ಬಡಿಯಿತು. ಇದಾದ ನಂತರ ಆತನನ್ನು ಕಾಲಿನಿಂದ ತುಳಿದಿದೆ ಎಂದು ಪ್ರತ್ಯಕ್ಷದರ್ಶಿಗಳ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!