ಬೆಳ್ತಂಗಡಿ: ಚಾರ್ಮಾಡಿ ಘಾಟಿಯಲ್ಲಿ ಒಂದು ತಿಂಗಳ ಹಿಂದೆ ವಾರವೊಂದರಲ್ಲಿ ನಾಲ್ಕು ಬಾರಿ ಕಾಣಿಸಿಕೊಂಡಿದ್ದ ಒಂಟಿ ಸಲಗ ಈಗ ಕಳೆದ ಎರಡು ದಿನಗಳಿಂದ ಮತ್ತೆ ವಾಹನ ಸವಾರರಿಗೆ ಪ್ರತ್ಯಕ್ಷವಾಗುತ್ತಿದೆ.
ಬುಧವಾರ ರಾತ್ರಿ ಬಸ್ ಸಂಚಾರಕ್ಕೆ ತಡೆಯೊಡ್ಡಿದ್ದ ಕಾಡಾನೆ ಶುಕ್ರವಾರ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ರಸ್ತೆ ಬದಿ ಮತ್ತೆ ಕಾಣಿಸಿಕೊಂಡಿದೆ.