February 3, 2026

ಮಂಗಳೂರು: ಸೇತುವೆಯಿಂದ ನದಿಗೆ ಆತ್ಮಹತ್ಯೆ ಪ್ರಕರಣ:
ಯುವಕನ ಮೃತದೇಹ ಪತ್ತೆ

0
219442-body

ಮಂಗಳೂರು: ಗುರುಪುರ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ವಾಮಂಜೂರಿನ ಯೋಗೀಶ್ ಯಾನೆ ಮುನ್ನ (31) ಅವರ ಮೃತದೇಹವು ಶುಕ್ರವಾರ ಗುರುಪುರ ಸಮೀಪದ ಬೈಲುಪೇಟೆ ಎಂಬಲ್ಲಿ ಪತ್ತೆಯಾಗಿದೆ.

ಯೋಗೀಶ್ ಬುಧವಾರ ಸಂಜೆಯಿಂದ ದಿಢೀರ್ ನಾಪತ್ತೆಯಾಗಿದ್ದರು. ಗುರುವಾರ ಬೆಳಗ್ಗೆ ಗುರುಪುರ ನದಿ ಸೇತುವೆ ಪಕ್ಕ ಅವರ ಬೈಕ್‌‌ ಹಾಗೂ ಚಪ್ಪಲಿ ಪತ್ತೆಯಾಗಿದ್ದು, ಅದರಂತೆ ಅಗ್ನಿಶಾಮಕ ದಳ ಮತ್ತು ಬಜ್ಪೆ ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಗುರುಪುರ ನದಿಯಲ್ಲಿ ಯೋಗೀಶ್‌ಗಾಗಿ ಗುರುವಾರ ಹುಡುಕಾಟ ನಡೆಸಿದ್ದರೂ ಪ್ರಯೋಜನವಾಗಲಿಲ್ಲ. ಆದರೆ ಶುಕ್ರವಾರ ಬೆಳಗ್ಗೆ ಯೋಗೀಶ್‌ ಅವರ ಮೃತದೇಹವು ಬೈಲುಪೇಟೆ ಮಸೀದಿಯ ಬಳಿ ಪತ್ತೆಯಾಗಿದೆ.

ಅವಿವಾಹಿತರಾಗಿದ್ದ ಯೋಗೀಶ್ ವೃತ್ತಿಯಲ್ಲಿ ಚಾಲಕರಾಗಿದ್ದರು. ಅವರ ನಾಪತ್ತೆ ಕುರಿತಂತೆ ಮಂಗಳೂರು ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿತ್ತು.

Leave a Reply

Your email address will not be published. Required fields are marked *

error: Content is protected !!