ಬೆಳ್ತಂಗಡಿ: ಮರದ ದೊಣ್ಣೆಯಿಂದ ಹೊಡೆದು ಕೊಲೆಯತ್ನ: ತಲವಾರು ದಾಳಿಯ ಆರೋಪಿಯಿಂದ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ.
ಬೆಳ್ತಂಗಡಿ: ಕೊಯ್ಯೂರು ಗ್ರಾಮದ ಬೀಜದಡಿ ನಿವಾಸಿ ವೆಂಕಪ್ಪ ಗೌಡ (40) ಎಂಬವರಿಗೆ ಪ್ರಮೋದ್ ಎಂಬಾತ ಮರದ ದೊಣ್ಣೆಯಿಂದ ತಲೆಗೆ ಹೊಡೆದು ಹಲ್ಲೆ ನಡೆಸಿ ಕೊಲೆಯತ್ನ ನಡೆಸಿದ್ದಾನೆ.
ಜಮೀನಿನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರಮೋದ್ ಮನೆಗೆ ಅಕ್ರಮ ಪ್ರವೇಶಗೈದು ಮರದ ದೊಣ್ಣೆಯಿಂದ ಹೊಡೆದಿದ್ದಾನೆ. ಗಂಭೀರ ಗಾಯಗೊಂಡ ವೆಂಕಪ್ಪ ಗೌಡರ ಬೊಬ್ಬೆ ಕೇಳಿ ಸ್ಥಳೀಯರು ಓಡಿ ಬಂದು ವೆಂಕಪ್ಪ ಗೌಡರನ್ನು ಬೆಳ್ತಂಗಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ.
ಆರೋಪಿ ಪ್ರಮೋದ್ ಎಂಬಾತ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು , ಈ ಹಿಂದೆ ವೆಂಕಪ್ಪ ಗೌಡ ಹಾಗೂ ಅವರ ಸಹೋದರನ ಮೇಲೆ ತಲಾವಾರು ದಾಳಿ ನಡೆಸಿದ ಆರೋಪ ಎದುರಿಸುತ್ತಿದ್ದಾನೆ.
ಘಟನೆ ಬಗ್ಗೆ ಬೆಳ್ತಂಗಡಿ ಪೋಲಿಸರು ಪ್ರಕರಣ ದಾಖಲಿಸಿ , ತನಿಖೆ ನಡೆಸುತ್ತಿದ್ದಾರೆ.






