ಭೀಕರ ರಸ್ತೆ ಅಪಘಾತ: ನಾಲ್ವರು ಯೂಟ್ಯೂಬರ್ ಗಳು ಮೃತ್ಯು
ಉತ್ತರಪ್ರದೇಶ: ಹುಟ್ಟುಹಬ್ಬ ಕಾರ್ಯಕ್ರಮ ಮುಗಿಸಿ ಮನೆಗೆ ವಾಪಸ್ಸಾಗುವ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಯೂಟ್ಯೂಬರ್ ಗಳು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ.
ಮೃತ ಯೂಟ್ಯೂಬರ್ ಗಳನ್ನು ಮೃತರನ್ನು ಲಕ್ಕಿ, ಸಲ್ಮಾನ್, ಶಾರುಖ್ ಮತ್ತು ಶಾನವಾಜ್ ಎಂದು ಗುರುತಿಸಲಾಗಿದೆ.
ನಾಲ್ವರು ಯುವಕರು ಯೂಟ್ಯೂಬರ್ ಗಳಾಗಿದ್ದು ರೌಂಡ್ 2 ವರ್ಲ್ಡ್ ಚಾನೆಲ್ ನಲ್ಲಿ ಹಾಸ್ಯ ವಿಷಯವನ್ನು ರಚಿಸುತಿದ್ದರು ಎಂದು ವರದಿಯಾಗಿದೆ.




