February 3, 2026

ಅಡ್ಯಾರುಪದವು: ಮುಸ್ಲಿಂ ಯುವಕನ ಮೇಲೆ ತಲವಾರ್ ದಾಳಿ:
ಆಟೋ ಚಾಲಕ ರಝಾಕ್ ಸ್ಥಿತಿ ಚಿಂತಾಜನಕ

0
IMG-20211210-WA0065.jpg

ಮಂಗಳೂರು: ಯುವಕನ ಮೇಲೆ ತಂಡಯೊಂದು ತಲವಾರು ದಾಳಿ ನಡೆಸಿರುವ ಘಟನೆ ಅಡ್ಯಾರುಪದವು ಸಮೀಪ ನಡೆದಿದೆ.

ಘಟನೆಯಿಂದ ಅಡ್ಯಾರುಪದವು ನಿವಾಸಿ ಅಬ್ದುಲ್ ರಝಾಕ್ ಗಂಭೀರ ಗಾಯಗೊಂಡಿದ್ದಾರೆ.
ರಝಾಕ್ ಅವರು ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದು,
ಬಿತ್ತ್ ಪಾದೆ ಪಡು ಪರಿಸರದಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿದ ಜೀವನ್, ಕಿಶೋರ್, ಸುಜಿತ್ , ಗಣೇಶ್ ಹಾಗೂ ತಂಡ ಮಾರಕಾಯುಧಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದೆ ಎಂದು ಆರೋಪಿಸಲಾಗಿದೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ರಝಾಕ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!