ಬೈಂದೂರು: ವಿದ್ಯುತ್ ಟ್ರಾನ್ಸ್‌ಫಾರ್ಮರ್ ರಿಪೇರಿ ಮಾಡುವ ವೇಳೆ ವಿದ್ಯುತ್ ಶಾಕ್ ತಗಲಿ ಲೈನ್‌ಮನ್ ಮೃತಪಟ್ಟ ಘಟನೆ ಬೈಂದೂರಿನಲ್ಲಿ ಸೋಮವಾರ ನಡೆದಿದೆ.
ಸಲೀಂ (38) ಮೃತಪಟ್ಟ ಲೈನ್‌ಮನ್. ಸೋಮವಾರ ಮಧ್ಯಾಹ್ನ ತಗ್ಗರ್ಸೆ ಗ್ರಾಮದ ಹೆಗ್ಗೇರಿಯಲ್ಲಿ ಟ್ರಾನ್ಸ್‌ಫಾರ್ಮರ್ ಬಳಿ ವಿದ್ಯುತ್ ಸಂಪರ್ಕ ರಿಪೇರಿ ಮಾಡುವ ವೇಳೆ ಈ ದುರ್ಘಟನೆ ನಡೆದಿದೆ.