March 18, 2026

ಪಡುಬಿದ್ರಿ: ಎರ್ಮಾಳು ಗ್ರಾಮದ ಯುವತಿ ನಾಪತ್ತೆ

0
image_editor_output_image-899532027-1717565824017.jpg

ಪಡುಬಿದ್ರಿ: ಕಾಪು ಮಾರಿಗುಡಿ ಬಳಿ ಸೋಮವಾರ ಬೆಳಗ್ಗೆ ಸ್ಕೂಟರ್‌ ಇಟ್ಟು ಹೋಗಿರುವ ಎರ್ಮಾಳು ಗ್ರಾಮದ ನಿವಾಸಿ ವರ್ಷಾ (27) ನಾಪತ್ತೆಯಾಗಿರುವ ಬಗ್ಗೆ ಅವರ ಅಣ್ಣ ಪಡುಬಿದ್ರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಅವರ ಪತಿ ಪಾದೂರು ಐಎಸ್‌ಪಿಆರ್‌ಎಲ್‌ನಲ್ಲಿ ಎಲೆಕ್ಟ್ರಿಷಿಯನ್‌ ಆಗಿದ್ದು, ಕೆಲಸಕ್ಕೆ ಹೋಗಿದ್ದರು. ಮನೆ ಬಿಟ್ಟು ತೆರಳುವ ವೇಳೆ ಅತ್ತೆ, ಮಾವ ಕೂಡ ಮನೆಯಲ್ಲಿ ಇರಲಿಲ್ಲ.

ವರ್ಷಾ ಅವರು 5.2 ಅಡಿ ಎತ್ತರ, ಗೋಧಿ ಮೈಬಣ್ಣ, ದಪ್ಪ ಶರೀರ ಹೊಂದಿರುವ ಅವರು ಕರಿಮಣಿ ಸರ ಧರಿಸಿದ್ದಾರೆ. ತುಳು, ಕನ್ನಡ ಭಾಷೆ ಮಾತಾಡಬಲ್ಲವರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!