March 17, 2026

ಉಳ್ಳಾಲ: ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ, ಮೂವರಿಗೆ ಗಾಯ

0
image_editor_output_image-879092826-1716802100030.jpg

ಉಳ್ಳಾಲ: ಕಾರುಗಳ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ಮೂವರು ಗಾಯಗೊಂಡಿರುವ ಘಟನೆ ಹರೇಕಳ- ಅಡ್ಯಾರ್ ನೂತನ ಸೇತುವೆಯಲ್ಲಿ ನಡೆದಿದೆ.

ಅಡ್ಯಾರ್ ಕಡೆಯಿಂದ ಹರೇಕಳ ಬರುತ್ತಿದ್ದ ಮಹಿಳೆಯೊಬ್ಬರು ಚಲಾಯಿಸುತ್ತಿದ್ದ ಆಲ್ಟೋ ಕಾರು ಹಾಗೂ ಎದುರಿನಿಂದ ಬಂದ ಇಕೋ ಸ್ಪೋರ್ಟ್ಸ್ ಕಾರುಗಳ ಮಧ್ಯೆ ಅಪಘಾತ ಸಂಭವಿಸಿದೆ.

ಕಾರಿನಲ್ಲಿದ್ದ ಮಹಿಳೆ, ಸಹಪ್ರಯಾಣಿಕೆ ಹಾಗೂ ಇನ್ನೊಂದು ಕಾರಿನಲ್ಲಿದ್ದ ಚಾಲಕ ಗಾಯಗೊಂಡಿದ್ದಾರೆ. ಈ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!