ಪಣಜಿ: ಚಾಲಕನ ನಿಯಂತ್ರಣ ತಪ್ಪಿದ ಬಸ್ಸೊಂದು ರಸ್ತೆ ಬದಿಯ ಗುಡಿಸಲಿಗೆ ನುಗ್ಗಿದ ಪರಿಣಾಮ ಗುಡಿಸಲಿನೊಳಗೆ ಮಲಗಿದ್ದ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ.
ಘಟನೆಯಿಂದ ಐವರು ಗಂಭೀರ ಗಾಯಗೊಂಡಿದ್ದು ವೆರ್ನಾ ಇಂಡಸ್ಟ್ರಿಯಲ್ ಎಸ್ಟೇಟ್ ನಲ್ಲಿ ತಡರಾತ್ರಿ ಸಂಭವಿಸಿದೆ. ಮೃತ ಕಾರ್ಮಿಕರನ್ನು ಬಿಹಾರ ಮೂಲದವರೆಂದು ಹೇಳಲಾಗಿದೆ.

