March 18, 2026

ಗೇಮಿಂಗ್‌ ಝೋನ್‌ನಲ್ಲಿ ಅಗ್ನಿ ಅವಘಡ: ದಂಪತಿ ಮೃತ್ಯು

0
image_editor_output_image1837329441-1716790256709.jpg

ಅಹ್ಮದಾಬಾದ್‌:‌ ಗುಜರಾತ್‌ ರಾಜ್‌ ಕೋಟ್‌ ನಲ್ಲಿನ ಗೇಮಿಂಗ್‌ ಜೋನ್‌ ಒಂದರಲ್ಲಿ ನಡೆದ ಅಗ್ನಿ ಅವಘಡದಲ್ಲಿ ದಂಪತಿ ಮೃತಪಟ್ಟಿದ್ದಾರೆ.

ಅಕ್ಷಯ್ ಧೋಲಾರಿಯಾ -ಖ್ಯಾತಿ ಸ್ವಾಲಿವಿಯಾ ಬೆಂಕಿಯಲ್ಲಿ ಬೆಂದು ಹೋಗಿದ್ದಾರೆ. ಅಕ್ಷಯ್‌ ಕೆನಾಡದಲ್ಲಿ ವ್ಯಾಸಂಗ ಮಾಡುತ್ತಿದ್ದು, ಮದುವೆಯಾಗಲು ಭಾರತಕ್ಕೆ ಬಂದಿದ್ದರು. ಕಳೆದ ವಾರ ಅಷ್ಟೇ ಇಬ್ಬರು ಕೋರ್ಟಿನಲ್ಲಿ ರಿಜಿಸ್ಟಾರ್‌ ಮ್ಯಾರೇಜ್‌ ಆಗಿದ್ದರು.

ಈ ಘಟನೆಯಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಇದುವರೆಗೆ 34 ಮಂದಿ ಮೃತಪಟ್ಟಿದ್ದಾರೆ. ಕೆಲವರು ಸುಟ್ಟು ಕರಕಲಾಗಿದ್ದು, ಇನ್ನು ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!