May 6, 2026

ಕಾರವಾರ: ಯುವತಿಯರ ಫೋಟೊ ಅಶ್ಲೀಲ ಎಡಿಟ್ ಮಾಡಿ ಬೆದರಿಕೆ: ಆರೋಪಿಯ ಬಂಧನ

0
image_editor_output_image-74548055-1716791266924.jpg

ಕಾರವಾರ: ಯುವತಿಯರ ಫೋಟೋ ತೆಗೆಸಿಕೊಂಡು ಅವುಗಳನ್ನು ಅಶ್ಲೀಲವೆಂಬಂತೆ ಎಡಿಟ್ ಮಾಡಿ ಬೆದರಿಸಿ ಅತ್ಯಾಚಾರವೆಸಗುತ್ತಿದ್ದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿಸಲು ಬಂದಿದ್ದ ಪೊಲೀಸರಿಗೆ ಕಲ್ಲೇಟು
ಅತ್ಯಾಚಾರ, ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಅರ್ಜುನ್ ಅಲಿಯಾಸ್ ಅರುಣ ಲಕ್ಷ್ಮಣ ಗೌಡ (27) ಎನ್ನುವಾತನನ್ನು ಬಂಧಿಸಲು ವಾರೆಂಟ್ನೊಂದಿಗೆ ಹೋಗಿದ್ದ ಮೂವರು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮಳಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೋಪಿಯ ತಾಯಿ ನಾಗವೇಣಿ ಲಕ್ಷ್ಮಣ ಗೌಡ (50) ಹಾಗೂ ಸಂಬಂಧಿ ಬಾಲಚಂದ್ರ ಗೌಡ (42) ಎಂಬುವರು ಪೊಲೀಸರ ಮೇಲೆಯೇ ಕಲ್ಲು ತೂಡಿದ್ದಾರೆ.

ಕಲ್ಲು ಹಾಗೂ ಹೆಂಚು ತುಂಡುಗಳ ದಾಳಿಯಿಂದ ಬನವಾಸಿ ಪೊಲೀಸ್ ಠಾಣೆಯ ಜಗದೀಶ ಕೆ., ಮಂಜಪ್ಪ ಪಿ. ಮಂಜುನಾಥ ಡಿ. ನಡುವಿನಮನೆ ಎಂಬವರಿಗೆ ಗಾಯಗಳಾಗಿವೆ.

Leave a Reply

Your email address will not be published. Required fields are marked *

error: Content is protected !!