March 24, 2026

IPL ಬೆಟ್ಟಿಂಗ್‌ನಿಂದ ಸಾಲಕ್ಕೆ ತುತ್ತಾಗಿ ಯುವಕ ಆತ್ಮಹತ್ಯೆ

0
image_editor_output_image-248474711-1716202245729.jpg

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಯುವಕನೊಬ್ಬ ಐಪಿಎಲ್‌ ಬೆಟ್ಟಿಂಗ್‌ನಿಂದ ಸಾಲಕ್ಕೆ ತುತ್ತಾಗಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮಸ್ಕಿ ತಾಲೂಕಿನ ಉದ್ಬಾಳ ಗ್ರಾಮದ ಮುದಿಬಸವ(29) ಆತ್ಮಹತ್ಯೆ ಮಾಡಿಕೊಂಡ ಯುವಕ. ಐಪಿಎಲ್‌ ಶುರುವಾದ ಬಳಿಕ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಯುವಕ.

ಬೆಟ್ಟಿಂಗ್ ನಲ್ಲಿ ಸಾಕಷ್ಟು ಹಣ ಕಳೆದುಕೊಂಡರು ಅದರಿಂದ ಹೊರಬರಲಾಗದೆ ಸಾಲ ಮಾಡಿ ಬೆಟ್ಟಿಂಗ್ ಮುಂದುವರಿಸಿದ್ದ.

ಸಾಲ ಹೆಚ್ಚಾಗಿ ಮಾನಸಿಕೆ ಒತ್ತಡದಿಂದ ಆತ್ಮಹತ್ಯೆಗೆ ಶರಣಾಗಿರುವ ಯುವಕ. ಸದ್ಯ ಘಟನೆ ಸಂಬಂಧ ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!