March 24, 2026

ಬಂಟ್ವಾಳ: ಕಾರು ಢಿಕ್ಕಿಯಾಗಿ ಪುತ್ತೂರಿನ ವ್ಯಕ್ತಿ ಸಾವು

0
image_editor_output_image528231732-1716204233765.jpg

ಬಂಟ್ವಾಳ: ದ್ವಿಚಕ್ರ ಸವಾರರೊಬ್ಬರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ಗಾಯಗೊಂಡ ಘಟನೆ ಮಂಚಿ ಗ್ರಾಮದ ಕೋಕಳ ಸಮೀಪದ ನೂಜಿ ಕಾಯರ್ಪಡು ಬಳಿ ನಡೆದಿರುವುದಾಗಿ ವರದಿಯಾಗಿದೆ.

ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಆಕ್ಟಿವಾ ಸವಾರ ಮುಡಿಪು ಇನ್ಫೋಸಿಸ್‌ ಸೆಕ್ಯೂರಿಟಿ ಸಿಬ್ಬಂದಿ, ಪುತ್ತೂರು ನೆಹರು ನಗರದ ಕಲ್ಲೆಗದ ರಕೇಶ್ವರಿ ಗುಡಿ ಹಿಂಬದಿಯ ನಿವಾಸಿ ಚಿದಾನಂದ ಕಾಮತ್ ಮೃತಪಟ್ಟಿದ್ದಾರೆ.

ಗಂಭೀರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಈ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಬಂಟ್ವಾಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಸ್ಥಳದಲ್ಲೇ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!