ಕುಂದಾಪುರ: ಮನೆಯಲ್ಲಿ ಮಲಗಿದ್ದಲ್ಲೇ ವ್ಯಕ್ತಿ ಸಾವು
ಕುಂದಾಪುರ: ವೀಡಿಯೋಗ್ರಾಫರ್, ಡೆಕೋರೇಟರ್, ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ ಕುಂದಾಪುರ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಅಭಿನಂದನ್ (49) ಮುಂಬಯಿಗೆ ತೆರಳಿದ್ದ ವೇಳೆ ಸ್ನೇಹಿತರ ಮನೆಯಲ್ಲಿ ಮಲಗಿದ್ದಲ್ಲೇ ಸಾವನ್ನಪ್ಪಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ.
ಘಟನೆ ಮೇ 18ರಂದು ಸಂಭವಿಸಿದೆ.ಕುಂದಾಪುರದ ಪ್ರಸಿದ್ಧ ಬಸಂತ್ ಸ್ಟುಡಿಯೋದ ಮಾಲಕ ರಾಮಚಂದ್ರ ಅವರ ಪುತ್ರರಾಗಿದ್ದ ಅಭಿನಂದನ್ ಕೆಲವು ದಿನಗಳ ಹಿಂದೆ ಕಾರ್ಯ ನಿಮಿತ್ತ ಮುಂಬಯಿಗೆ ತೆರಳಿದ್ದರು. ಅವರು ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.




