February 3, 2026

ಉಳ್ಳಾಲ: ಯುವಕನಿಗೆ ಚೂರಿ ಇರಿತ: ಪ್ರಕರಣ ದಾಖಲು

0
first-information-report

ಉಳ್ಳಾಲ: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನಿಗೆ ಚೂರಿಯಿಂದ ಇರಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ತಲಪಾಡಿ ದೇವಸ್ಥಾನ ಬಳಿ ನಡೆದಿದೆ.

ಕಿನ್ಯ ನಿವಾಸಿ ಮನೋಜ್ ಆಚಾರ್ಯ (31) ಚೂರಿ ಇರಿತಕ್ಕೊಳಗಾದ ವ್ಯಕ್ತಿ. ಶರತ್ ಎಂಬಾತ ಚೂರಿಯಿಂದ ಇರಿದ ಆರೋಪಿ.

ಘಟನೆ ವಿವರ: ಮನೋಜ್ ಮತ್ತು ಶರತ್ ಗೆ ಕುಟುಂಬ ಹಾಗೂ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಹಳೇ ದ್ವೇಷ ಇತ್ತು ಎನ್ನಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಶರತ್ ಮನೋಜ್ ಆಚಾರ್ಯ ಎಂಬಾತನನ್ನು ಆಗಾಗ ತಗಾದೆ ಎತ್ತುತ್ತಿದ್ದ. ರವಿವಾರ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮನೋಜ್ ಗೆ ಶರತ್ ಚೂರಿಯಿಂದ ಇರಿದು ಗಾಯಗೊಳಿಸಿದ್ದಾನೆ. ಈ ಬಗ್ಗೆ ಮನೋಜ್ ನೀಡಿದ ದೂರಿನಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

error: Content is protected !!