ಮಾಜಿ ಸಚಿವರ ಪತ್ನಿಯ ಹತ್ಯೆ
ಕಝಕಿಸ್ತಾನ್: ಕಜಕಿಸ್ತಾನದಲ್ಲಿ ಮಾಜಿ ಸಚಿವರೊಬ್ಬರು ತಮ್ಮ ಪತ್ನಿಯನ್ನೇ ಹಲ್ಲೆ ಮಾಡಿ ಹತ್ಯೆ ಮಾಡಿದ ಘಟನೆ ವರದಿಯಾಗಿದೆ.
ಮುಖಕ್ಕೆ ಪಂಚ್, ಎದೆ ಸೇರಿದಂತೆ ತಲೆಗೆ ಕಾಲಿನಿಂದ ಒದ್ದು ಪತ್ನಿಯನ್ನು ಹತ್ಯೆ ಮಾಡಿದ ಭೀಕರ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಝಕಿಸ್ತಾನ ಮಾಜಿ ಸಚಿವ ಕೌಂಡ್ಯಕ್ ಬಿಶಿಂಬಯೆವ್ ಕೌರ್ಯಕ್ಕೆ ವಿಶ್ವವೇ ಬೆಚ್ಚಿ ಬಿದ್ದಿದೆ. ಈತನ ಭೀಕರ ದಾಳಿಗೆ 31 ವರ್ಷದ ಪತ್ನಿ ಸಾಲ್ತನಾಟ್ ನುಕೆನೋವಾ ದಾರುಣವಾಗಿ ಅಂತ್ಯಕಂಡಿದ್ದಾಳೆ.
ಈ ಕುರಿತು ಕಝಕಿಸ್ತಾನ ಕೋರ್ಟ್ ತ್ವರಿತ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಯಲಾಗಿದೆ. ಬರೋಬ್ಬರಿ 8 ಗಂಟೆಗಳ ಕಾಲ ಪತ್ನಿ ಮೇಲೆ ಕೌಂಡ್ಯಕ್ ಬಿಶಿಂಬಯೆವ್ ಹಲ್ಲೆ ನಡೆಸಿದ ಮಾಹಿತಿ ಬಯಲಾಗಿದೆ.