December 15, 2025

ಬಿಸಿಲಿನ ತಾಪಕ್ಕೆ ಕುಸಿದು ಬಿದ್ದು ಬಸ್ ಕಂಡಕ್ಟರ್ ಮೃತ್ಯು

0
image_editor_output_image630988078-1714770264827.jpg

ರಾಯಚೂರು: ಬಿಸಿಲಿನ ತಾಪಕ್ಕೆ ಬಿಎಂಟಿಸಿ ಬಸ್ ಕಂಡಕ್ಟರ್ ಒಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಮಸ್ಕಿ ಪಟ್ಟಣದಲ್ಲಿ ನಡೆದಿದೆ.

ಹಸಮಕಲ್ ಮೂಲದ ಮಲ್ಲಯ್ಯ (45) ಬಿಸಿಲಿನ ತಾಪಕ್ಕೆ ಬಲಿಯಾದವರು ಎಂದು ತಿಳಿದು ಬಂದಿದೆ. ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರು, ರಜೆಯ ಮೇಲೆ ಊರಿಗೆ ತೆರಳಿದ್ದರು.

ಈ ವೇಳೆ ಮನೆಗೆ ಬೇಕಾದ ಕಿರಾಣಿ ಸಾಮಾಗ್ರಿಗಳನ್ನು ತರಲು ತೆರಳಿದ್ದಾಗ ಬಿಸಿಲಿನ ತಾಪಕ್ಕೆ ಅವರು ಕುಸಿದು ಬಿದ್ದಿದ್ದಾರೆ. ಸಾರ್ವಜನಿಕರು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದ್ದಾರೆ. ದುರಾದೃಷ್ಟವಶಾತ್ ಅವರು ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *

error: Content is protected !!