December 16, 2025

ವಿಡಿಯೋ ಬಿಡುಗಡೆ ಮಾಡಲು ನನಗೆ ಏನು ಹುಚ್ಚು ಹಿಡಿದಿಲ್ಲ: ಎಚ್‌.ಡಿ. ಕುಮಾರಸ್ವಾಮಿ

0
image_editor_output_image-1218497372-1714770425498.jpg

ರಾಯಚೂರು: ನಾನೇ ವಿಡಿಯೋವನ್ನು ಹೊರಗಡೆ ರಿಲೀಸ್‌ ಮಾಡಿದ್ದೇನೆ ಎಂದು ಕೆಲವರು ಹೇಳುತ್ತಿದ್ದಾರೆ. ವಿಡಿಯೋ ಬಿಡುಗಡೆ ಮಾಡಲು ನನಗೆ ಏನು ಹುಚ್ಚು ಹಿಡಿದಿದ್ಯಾ? ಟೆಂಟ್‌ನಲ್ಲಿ ಬ್ಲೂ ಫಿಲಂ ಬಿಡುಗಡೆ ಮಾಡುವವರು ಇದನ್ನು ಮಾಡಿದ್ದಾರೆ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ರಾಯಚೂರಿನ ಸಿಂಧನೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ತಂದೆತಾಯಿಗೆ ಆತ್ಮ ಸ್ಥೈರ್ಯ ತುಂಬಲು ನಾನು ಎರಡು ದಿನ ಬೆಂಗಳೂರಿನಲ್ಲಿದ್ದೆ. ಅಲ್ಲಿ ಕ್ಯಾಮೆರಾಗಳಿದ್ದವು ವಿಡಿಯೋಗಳನ್ನ ತರಿಸಿಕೊಂಡು ನೋಡಿ. ನನ್ನ ತಂದೆ ತಾಯಿ ಜೀವಕ್ಕೆ ಅಪಾಯ ಆಗಬಾರದು. ಅವರು ಯಾವ ರೀತಿ ಬದುಕಿದ್ದಾರೆ ಅಂತ ನೀವು ಮರೆತಿರಬಹುದು. ಸಿದ್ದರಾಮಯ್ಯನವರೇ ನೀವು ದಿನ ಇಷ್ಟಬಂದಂತೆ ಹೇಳಿಕೆ ನೀಡುತ್ತಿದ್ದೀರಿ. ಇಷ್ಟು ದಿನ ಎಸ್‌ಐಟಿ (SIT) ರಚನೆ ಮಾಡಿದ್ದಿರಲ್ಲಾ ಯಾವುದರಲ್ಲಿ ಶಿಕ್ಷೆಯಾಗಿದೆ ಎಂದು ಪ್ರಶ್ನಿಸಿದರು.

Leave a Reply

Your email address will not be published. Required fields are marked *

error: Content is protected !!