September 19, 2024

ರಾಹುಲ್ ಗಾಂಧಿ ಒಟ್ಟು‌ ಆಸ್ತಿ ಮೌಲ್ಯ 20 ಕೋಟಿ ರೂ.: ಯಾವುದೇ ಮನೆ, ಕಾರು ಇಲ್ಲ

0

ರಾಯ್ ಬರೇಲಿ: ಲೋಕಸಭೆ ಚುನಾವಣೆಗೆ ಶುಕ್ರವಾರ ರಾಯ್ ಬರೇಲಿಯಿಂದ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ, 4.2 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಸೇರಿದಂತೆ 20 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ. ಆದರೆ ಅವರು ಯಾವುದೇ ಮನೆ ಅಥವಾ ಕಾರು ಇಲ್ಲ ಎಂದು ಹೇಳಿದ್ದಾರೆ.

4,33,60,519 ರೂಪಾಯಿ ಮೌಲ್ಯದ ಷೇರುಗಳು ಮತ್ತು 3,81,33,572 ರೂಪಾಯಿಗಳ ಮ್ಯೂಚುವಲ್ ಫಂಡ್, 26,25,157 ರೂಪಾಯಿಗಳ ಬ್ಯಾಂಕ್ ಬ್ಯಾಲೆನ್ಸ್ ಮತ್ತು 15,21,740 ರೂಪಾಯಿಗಳ ಚಿನ್ನದ ಬಾಂಡ್‌ಗಳು ಸೇರಿದಂತೆ 9,24,59,264 ರೂಪಾಯಿಗಳ ಚರಾಸ್ತಿ ಇದೆ. ಜೊತೆಗೆ 11,15,02,598 ರೂ. ಮೌಲ್ಯದ ಸ್ಥಿರಾಸ್ತಿ ಘೋಷಿಸಿದ್ದು, ಇವುಗಳಲ್ಲಿ ಪ್ರಸ್ತುತ 9,04,89,000 ಮೌಲ್ಯದ ಸ್ವಯಂ ಆಸ್ತಿಗಳು ಮತ್ತು 2,10,13,598 ಮೌಲ್ಯಗ ಪಿತ್ರಾರ್ಜಿತ ಆಸ್ತಿ ಸೇರಿವೆ.

Leave a Reply

Your email address will not be published. Required fields are marked *

error: Content is protected !!