February 4, 2026

ಪ್ರಜ್ವಲ್ ರೇವಣ್ಣ ಮುಸ್ಲಿಂ ಆಗಿದ್ದರೆ ಪ್ರಧಾನಿ ಮೋದಿ ಮಾತನಾಡುತ್ತಿದ್ದರು: ಭವ್ಯ ನರಸಿಂಹಮೂರ್ತಿ

0
image_editor_output_image1678272812-1714308849995.jpg

ಬೆಂಗಳೂರು: ಪ್ರಜ್ವಲ್ ರೇವಣ್ಣ ಮುಸ್ಲಿಂ ಆಗಿದ್ದರೆ ಪ್ರಧಾನಿ ಮೋದಿ ಮಾತನಾಡುತ್ತಿದ್ದರು ಎನಿಸುತ್ತದೆ ಎಂದು ಕಾಂಗ್ರೆಸ್ ವಕ್ತಾರೆ ಭವ್ಯ ನರಸಿಂಹಮೂರ್ತಿ ಕಿಡಿಗಾರಿದ್ದಾರೆ.

ಸಂಸದ ಪ್ರಜ್ವಲ್ ರೇವಣ್ಣ ಮಾಡಿದ್ದು ಇಡೀ ಭಾರತದ ಇತಿಹಾಸದಲ್ಲೇ ಅತ್ಯಂತ ಕ್ರೌರ್ಯವಾದ ಘಟನೆಯಾಗಿದೆ. ಅತ್ಯಾಚಾರಕ್ಕೆ ಒಳಗಾದ ಸಾವಿರಾರು ಹೆಣ್ಣುಮಕ್ಕಳು ಧ್ವನಿ ಇಲ್ಲದವರು. ಅಡುಗೆ ಕೆಲಸ ಮಾಡೋ ಅಜ್ಜಿಯನ್ನೂ ಆತ ಬಿಟ್ಟಿಲ್ಲ. ಆದರೆ ಪ್ರಜ್ವಲ್ ರೇವಣ್ಣ ಮಾಡಿದ ದೌರ್ಜನ್ಯ ಯಾವ ಜನಪ್ರತಿನಿಧಿಯೂ ಮಾಡಿಲ್ಲ. ಕರ್ನಾಟಕದಲ್ಲಿರುವ ಪ್ರಧಾನಿ ಮೋದಿಯವರೂ ಮಾತನಾಡಿಲ್ಲ.ಪ್ರಜ್ವಲ್ ರೇವಣ್ಣ ಮುಸ್ಲಿಂ ಆಗಿದ್ದರೆ ಪ್ರಧಾನಿ ಮಾತನಾಡುತ್ತಿದ್ದರು ಎನಿಸುತ್ತದೆ ಎಂದು ಕಾಂಗ್ರೆಸ್ ವಕ್ತಾರೆ ಭವ್ಯ ನರಸಿಂಹಮೂರ್ತಿ ಕಿಡಿಗಾರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಕೃತ್ಯದ ಬಗ್ಗೆ ಬಿಜೆಪಿಯವರು ಸಹ ಉತ್ತರ ನೀಡಬೇಕು. ಒಬ್ಬನೇ ಒಬ್ಬ ಬಿಜೆಪಿ ನಾಯಕಿಯರು ಮಾತನ್ನೇ ಆಡಿಲ್ಲ. ನಾಯಕರು ಬಾಯಿ ಬಿಟ್ಟಿಲ್ಲ. ತನ್ನ ಅಧಿಕಾರದ ದರ್ಪ ಬಳಸಿಕೊಂಡು ಹೀನ ಕೃತ್ಯ ಎಸಗಿರುವ ಈ ವ್ಯಕ್ತಿ ವಿರುದ್ಧ ಮೊದಲು ಮಾತನಾಡಬೇಕಿರುವುದು ಈ ದೇಶದ ಗೃಹಸಚಿವ ಅಮಿತ್ ಶಾ ಎಂದರು.

Leave a Reply

Your email address will not be published. Required fields are marked *

You may have missed

error: Content is protected !!