February 3, 2026

ಬಾಬಾಬುಡನ್ ಗಿರಿ ಪ್ರವಾಸಕ್ಕೆ ತೆರಳಿದ್ದ ಮಿನಿ ಬಸ್ ಪಲ್ಟಿ: ಒಂದೇ ಕುಟುಂಬದ 30 ಮಂದಿಗೆ ಗಾಯ

0
image_editor_output_image-4630170-1714309894530

ಚಿಕ್ಕಮಗಳೂರು: ಬಾಬಾಬುಡನ್ ಗಿರಿ ಪ್ರವಾಸಕ್ಕೆ ಆಗಮಿಸಿದ್ದ ಮಿನಿ ಬಸ್ ಅಪಘಾತವಾಗಿ 30 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಮಾಣಿಕ್ಯಧಾರಾ ತಿರುವಿನಲ್ಲಿ ಸಂಭವಿಸಿದೆ. ಹಿರಿಯೂರಿನ ಆದಿವಾಲದ ಒಂದೇ ಕುಟುಂಬದ 30 ಜನರಲ್ಲಿ ಮಕ್ಕಳು ಮಹಿಳೆಯರು ಸೇರಿದಂತೆ ಹಲವರಿದ್ದಾರೆ

ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಆದಿವಾಲದಿಂದ ಬಾಬಾಬುಡನ್ ಗಿರಿ ಪ್ರವಾಸಕ್ಕೆ ಆಗಮಿಸಿದ್ದ ಒಂದೇ ಕುಟುಂಬದ 30 ಜನರು ಸಂಚರಿಸುತ್ತಿದ್ದ ಮಿನಿ ಬಸ್ ಪಲ್ಟಿಯಾಗಿ ಮಕ್ಕಳು ಮಹಿಳೆಯರು ಸೇರಿದಂತೆ ಹಲವರಿಗೆ ಗಾಯಗಳಾಗಿವೆ. ಬಾಬಾಬುಡನ್ ಗಿರಿ ವೀಕ್ಷಿಸಿ ನಂತರ ಮಾಣಿಕ್ಯಧಾರಾ ಕಡೆಗೆ ತೆರಳುತ್ತಿದ್ದ ವೇಳೆ ಎರಡನೇ ತಿರುವಿನಲ್ಲಿ ಬಸ್ ಪಲ್ಟಿಯಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಹತ್ತಾರು ಆಂಬುಲನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ತರಲಾಯಿತು. ಸಣ್ಣ ಮಕ್ಕಳಿಗೆ ಗಂಭೀರ ಗಾಯಗಳಾಗಿದ್ದು ಓಬ್ಬರ ಸ್ಥಿತಿ ಗಂಭೀರ ಎನ್ನಲಾಗುತ್ತಿದೆ. ಏಕಾಏಕಿ ಮಾಣಿಕ್ಯಧಾರಾ ಕಡೆ ಹೋಗುತ್ತಿದ್ದ ಮಿನಿ ಬಸ್ ಸ್ಥಗಿತಗೊಂಡ ಕಾರಣ ಉಲ್ಟಾ ಬಸ್ ಪಲ್ಟಿಯಾಗಿದೆ. ಎಂದು ಗಾಯಗೊಂಡ ವ್ಯಕ್ತಿಯೊಬ್ಬರು ಹೇಳಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!