ವಿಟ್ಲ: ಕತ್ತಲೆ ಕೋಣೆಯಲ್ಲಿ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರ: ಮೊಬೈಲ್ FLASH ಲೈಟ್ ಸಹಾಯದಲ್ಲಿ ಹಣ ಡ್ರಾ ಮಾಡುವ ಗ್ರಾಹಕರು
ವಿಟ್ಲ: ವಿಟ್ಲದ ರಿಹಾ ಪ್ಲಾನೆಟ್ ನಲ್ಲಿರುವ ಕೆನರಾ ಬ್ಯಾಂಕ್ ಎಟಿಎಂ ನ ಕೋಣೆ ಕತ್ತಲೆಯಲ್ಲಿ ಕಾರ್ಯಾಚರಿಸುತ್ತಿದ್ದು, ಗ್ರಾಹಕರು ಮೊಬೈಲ್ ಪ್ಲೆಸ್ ಲೈಟ್ ನಲ್ಲಿ ಹಣ ಡ್ರಾ ಮಾಡುವ ಪರಿಸ್ಥಿತಿ ಎದುರಾಗಿದೆ.
ವಿಟ್ಲ ಪುತ್ತೂರು ರಸ್ತೆಯ ರಿಹಾ ಪ್ಲಾನೆಟ್ ನಲ್ಲಿ ಕಳೆದ ಹಲವಾರು ವರ್ಷಗಳಿಂದ ಇಲ್ಲಿ ಕೆನರಾ ಬ್ಯಾಂಕ್ ಗೆ ಸಂಬಂಧಿಸಿದ ಎಟಿಎಂ ಇದ್ದು, ಇದೀಗ ಆಟಕ್ಕುಂಟು ಲೆಕ್ಕಕ್ಕಲ್ಲ ಎಂಬಂತಾಗಿದೆ. ಇಲ್ಲಿ ಎರಡು ಎಸಿ ಇದ್ದು, ಅದು ಕೆಟ್ಟು ಹೋಗಿದೆ. ಕಳೆದ ಮೂರು ತಿಂಗಳುಗಳಿಂದ ಇಲ್ಲಿ ವಿದ್ಯುತ್ ದೀಪ ಇಲ್ಲದೇ ಕತ್ತಲೆಯಲ್ಲಿ ಜನರು ಮೊಬೈಲ್ ಲೈಟ್ ಬಳಸಿ ಪಿನ್ ಹಾಕಿ ಹಣ ಡ್ರಾ ಮಾಡುತ್ತಿದ್ದಾರೆ. ಎಟಿಎಂ ಕೋಣೆಯೊಳಗಡೆ ಕಸ ತುಂಬಿ ತುಳುಕುತ್ತಿದೆ. ಅದನ್ನು ಸ್ವಚ್ಛಗೊಳಿಸುವ ಕಾರ್ಯವಾಗಿಲ್ಲ. ವಿದ್ಯುತ್ ದೀಪ ಇಲ್ಲದ ಕಾರಣ ಜನರು ಎಟಿಎಂ ಒಳಗಡೆ ಹೋಗಲು ಭಯಪಡುವ ವಾತಾವರಣ ನಿರ್ಮಾಣಗೊಂಡಿದೆ. ಹಣ ಡ್ರಾ ಮಾಡುವ ವೇಳೆ ದರೋಡೆಕೋರರು ದಾಳಿ ನಡೆಸಿದ್ದರೂ ಯಾರಿಗೂ ಗೊತ್ತಾಗಲ್ಲ ಎಂಬ ಅಭಿಪ್ರಾಯ ಕೇಳಿ ಬಂದಿದೆ





