ಬೈಂದೂರು: ಜ್ಯುವೆಲ್ಲರಿ ವರ್ಕ್ಸ್ ಅಂಗಡಿಯ ಬೀಗ ಮುರಿದು ಕಳವು
ಬೈಂದೂರು: ಶಿರೂರು ಗ್ರಾಮದ ಕೆಳಪೇಟೆಯಲ್ಲಿರುವ ಜ್ಯುವೆಲ್ಲರಿ ವರ್ಕ್ಸ್ ಅಂಗಡಿಯ ಬೀಗ ಮುರಿದ ಕಳ್ಳರು ಹಳೇ ಬೆಳ್ಳಿ ಸಾಮಗ್ರಿ ಮತ್ತು ನಗದನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.
ಬೆಳಗ್ಗೆ ಅಂಗಡಿಯ ಮಾಲಕರು ನೋಡಿದಾಗ ಕಳ್ಳತನ ನಡೆದಿರುವುದು ಕಂಡು ಬಂದಿದೆ. ಯಾರೋ ಕಳ್ಳರು ಶಟರ್ ಬಾಗಿಲನ್ನು ಮುರಿದು ಅಂಗಡಿಯ ಒಳ ಪ್ರವೇಶಿಸಿ ಕ್ಯಾಶ್ ಕೌಂಟರ್ ನಲ್ಲಿ ಇಟ್ಟಿದ್ದ 40 ಸಾವಿರ ರೂ. ನಗದು ಹಾಗೂ ಅಂಗಡಿಯಲ್ಲಿಟ್ಟಿದ್ದ ಹಳೆಯ ಬೆಳ್ಳಿ ಜ್ಯುವೆಲ್ಲರಿ ಸಾಮಗ್ರಿಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.
ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





