ಸುಬ್ರಹ್ಮಣ್ಯ: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
ಸುಬ್ರಹ್ಮಣ್ಯ: ಕಾರಿಗೆ ಗೂಡ್ಸ್ ಆಟೋ ಢಿಕ್ಕಿಯಾದ ಪರಿಣಾಮ ಕಾರು ಚಾಲಕ ಗಾಯಗೊಂಡ ಘಟನೆ ಎ.23ರಂದು ಸುಬ್ರಹ್ಮಣ್ಯ-ಪಂಜ ರಸ್ತೆಯ ಏನೆಕಲ್ಲು ಸಮೀಪ ಸಂಭವಿಸಿದೆ.
ಮಡಿಕೇರಿಯ ಗೌತಮ್ ಬಿ.ಆರ್. (31) ಗಾಯಗೊಂಡವರು. ಗೌತಮ್ ತಮ್ಮ ಮನೆಯವರೊಂದಿಗೆ ಕಾರಿನಲ್ಲಿ ಏನೆಕಲ್ಲಿನ ಕೊರಗಜ್ಜ ದೈವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಅಜ್ಜಿಕಟ್ಟೆ ಎಂಬಲ್ಲಿ ಗೂಡ್ಸ್ ಆಟೋ ಢಿಕ್ಕಿ ಹೊಡೆದ ಪರಿಣಾಮ ಕಾರಿನ ಬಲಬದಿ ಜಖಂಗೊಂಡಿದೆ.
ಚಾಲಕ ಗೌತಮ್ ಅವರ ಕೈಗೆ ಗಾಯವಾಗಿದ್ದು ಸುಬ್ರಹ್ಮಣ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





