ವಿಟ್ಲ :ಡಿ”ಗ್ರೂಪ್ ವತಿಯಿಂದ ಆಹಾರ ಕಿಟ್ ವಿತರಣೆ.
ವಿಟ್ಲ: ವಿಟ್ಲ ಮೇಗಿನಪೇಟೆಯ ಜನತಾ ಕಾಲೊನಿಯ ಬಡ ಹಿಂದೂ ಕುಟುಂಬವೊಂದು ತುಂಬಾ ಸಂಕಷ್ಟದಲ್ಲಿದ್ದು ಮನೆಯ ನಾಲ್ಕು ಮಂದಿ ಸದಸ್ಯರಲ್ಲಿ ಮನೆಯ ಯಜಮಾನ ಅನಾರೋಗ್ಯ ಪೀಡಿತರಾಗಿದ್ದು,ಒಬ್ಬ ಮಗಳು ಅಂಗವಿಕಲೆಯಾಗಿದ್ದಾರೆ.
ಇವರ ಕಷ್ಟವನ್ನು ಮನಗಂಡ ವಿಟ್ಲ ಡಿ ‘ ಗ್ರೂಪ್ ಸಂಘಟನೆಯು ಅವರಿಗೆ ಅಹಾರ ಕಿಟ್ ವಿತರಿಸಿತು.
ಈ ಸಂದರ್ಭದಲ್ಲಿ ಡಿ’ ಗ್ರೂಪ್ ನ ಗೌರವಾಧ್ಯಕ್ಷ ಅಝೀಝ್ ಸನ,ಅಧ್ಯಕ್ಷ ರಿಯಾಝ್ ವಿ.ಎಚ್.ಕಾರ್ಯದರ್ಶಿ ಶಾಕಿರ್ ಅಳಕೆಮಜಲು,ಸದಸ್ಯರರಾದ ಖಲಂದರ್ ಪರ್ತಿಪ್ಪಾಡಿ,ವಿ.ಕೆ.ಎಂ. ಹಂಝ,ಸಮದ್ ಮೇಗಿನಪೇಟೆ,,ಅಶ್ರಫ್ ಮುಂತಾದವರಿದ್ದರು



