ಪುತ್ತೂರು: ಕಬಕ-ಮುರ ರೈಲ್ವೇ ಹಳಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ
ಪುತ್ತೂರು: ಇಲ್ಲಿನ ಮುರ ಎಂಬಲ್ಲಿ ಕಬಕ-ಪುತ್ತೂರು ರೈಲು ಸಂಚಾರದ ರೈಲ್ವೇ ಹಳಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ಎ.23ರಂದು ಬೆಳಗಿನ ಜಾವ ಬೆಳಕಿಗೆ ಬಂದಿದೆ.
ಮೃತಪಟ್ಟ ವ್ಯಕ್ತಿಯ ದೇಹ ಹಳಿಯಿಂದ ಸ್ವಲ್ಪ ದೂರಕ್ಕೆ ಎಸೆಯಲ್ಪಟ್ಟಿದ್ದು ಕಾಲು ತುಂಡಾದ ಸ್ಥಿತಿಯಲ್ಲಿ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ. ಇದು ಆತ್ಮಹತ್ಯೆಯೋ? ಅಥವಾ ರೈಲು ಡಿಕ್ಕಿಯಾಗಿ ಸಂಭವಿಸಿದ ಘಟನೆಯೋ ಅನ್ನುವುದು ತನಿಖೆ ವೇಳೆ ಬೆಳಕಿಗೆ ಬರಲಿದೆ.





