February 4, 2026

ವಿಟ್ಲ: ರೋಯಲ್ ಅಕಾಡೆಮಿ ವಿದ್ಯಾರ್ಥಿನಿಯರ “ಕ್ಲಾಸ್ ಆನ್ ವ್ಹೀಲ್ಸ್” ಉದ್ಘಾಟನೆ

0
image_editor_output_image1085720882-1713788389783

ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ನ “ಕ್ಲಾಸ್ ಆನ್ ವ್ಹೀಲ್ಸ್” ಕಂಪ್ಯೂಟರ್ ಸಾಕ್ಷರತಾ ಬಸ್ ನ ಬೇಸಿಗೆ ಶಿಬಿರದ ಉದ್ಘಾಟನೆಯು ವಿಟ್ಲದ ಮೇಗಿನಪೇಟೆ ರಾಯಲ್ ಅಕಾಡೆಮಿ ವಠಾರದಲ್ಲಿ ಸೋಮವಾರ ನೆರವೇರಿತು.

ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಜಲಜಾಕ್ಷಿ ಅವರು ಕಂಪ್ಯೂಟರ್ ತರಗತಿಯನ್ನು ಉದ್ಘಾಟಿಸಿದರು. ಎಂ.ಫ್ರೆಂಡ್ಸ್ ಪ್ರದಾನ ಕಾರ್ಯದರ್ಶಿ ರಶೀದ್ ವಿಟ್ಲ ಅಧ್ಯಕ್ಷತೆ ವಹಿಸಿದರು. ಎಂ.ಫ್ರೆಂಡ್ಸ್ ಸದಸ್ಯ ನೌಶೀನ್ ಬದ್ರಿಯಾ, ರಾಯಲ್ ಅಕಾಡೆಮಿಯ ರಾಝಿಯಾ ಮುಕ್ತಾರ್, ಆಬಿದಾ ರಾಝಿಕ್, ಶಾಕಿರ್ ಅಳಕೆಮಜಲು, ಹಂಝ ಮೇಗಿನಪೇಟೆ, ಶಿಕ್ಷಕಿಯರಾದ ವೀಕ್ಷಾ, ಚೈತ್ರಾ ಉಪಸ್ಥಿತರಿದ್ದರು. ಎಂ.ಫ್ರೆಂಡ್ಸ್ ಸದಸ್ಯ ಕಲಂದರ್ ಪರ್ತಿಪಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ರಾಯಲ್ ಅಕಾಡೆಮಿಯ ಫ್ಯಾಶನ್ ಡಿಸೈನಿಂಗ್ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲಾಯಿತು.

Leave a Reply

Your email address will not be published. Required fields are marked *

error: Content is protected !!