February 4, 2026

ಬಂಟ್ವಾಳ: ಮನೆಯಿಂದಲೇ ಮತದಾನ ಮಾಡಿದ ಜನಾರ್ದನ ಪೂಜಾರಿ

0
image_editor_output_image1551692771-1713338133803.jpg

ಬಂಟ್ವಾಳ: ಬಿ ಮೂಡ ಗ್ರಾಮದ ಬಸ್ತಿಪಡ್ಪುವಿನಲ್ಲಿರುವ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿಯವರ ನಿವಾಸದಲ್ಲಿಯೇ ಅವರ ಮತದಾನ ಪ್ರಕ್ರಿಯೆ ನಡೆಯಿತು.

ಇದುವರೆಗೆ ಜನಾರ್ದನ ಪೂಜಾರಿಯವರು ಬಂಟ್ವಾಳದ ಭಂಡಾರಿಬೆಟ್ಟು ಶಾಲೆಯ ಭಾಗ ಸಂಖ್ಯೆ 130 ಮತಗಟ್ಟೆಗೆ ತೆರಳಿ ಮತದಾನ ಮಾಡುತ್ತಿದ್ದರು. ಇದೇ ಮೊದಲ ಬಾರಿಗೆ ಅವರು ಮತವನ್ನು ಮನೆಯಲ್ಲೇ ಚಲಾಯಿಸಿದ್ದಾರೆ.

ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ 85 ವರ್ಷ ಮೇಲ್ಪಟ್ಟ ಮತ್ತು ಶೇ.40ಕ್ಕಿಂತ ಹೆಚ್ಚಿನ ಅಂಗವೈಕಲ್ಯತೆ ಹೊಂದಿರುವ ಮತದಾರರ ಮನೆಗಳಿಗೆ ಮತಗಟ್ಟೆ ಅಧಿಕಾರಿಗಳ ತಂಡ ತೆರಳಿ ಮತದಾನ ಮಾಡಿಸುವ ಪ್ರಕ್ರಿಯೆ ಎ.15ರಿಂದ ಚಾಲನೆಗೊಂಡಿದೆ.

Leave a Reply

Your email address will not be published. Required fields are marked *

error: Content is protected !!