ಕಾರು ಮಾರಾಟದ ವೇಳೆ ಗಲಾಟೆ: 1 ಕೋಟಿ ಬೆಲೆಯ ಲ್ಯಾಂಬೋರ್ಗಿನಿ ಕಾರಿಗೆ ಬೆಂಕಿ ಹಚ್ಚಿದ ವ್ಯಕ್ತಿ
ಹೈದರಾಬಾದ್: ಸೆಕೆಂಡ್ ಹ್ಯಾಂಡ್ ಕಾರಿನ ಮಾರಾಟಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ತಂಡವೊಂದು 1 ಕೋಟಿ ಬೆಲೆ ಬಾಳುವ ಲ್ಯಾಂಬೋರ್ಗಿನಿ ಕಾರಿಗೆ ರಸ್ತೆ ಮಧ್ಯೆಯೆ ಬೆಂಕಿ ಹಚ್ಚಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಸದ್ಯ ಘಟನೆಯ ವಿಡಿಯೋ ವೈರಲ್ ಆಗಿದೆ.
ಪೊಲೀಸರ ಪ್ರಕಾರ, ಹಳೆಯ ಕಾರುಗಳ ಮಾರಾಟ ಮತ್ತು ಖರೀದಿಯಲ್ಲಿ ವ್ಯವಹರಿಸುತ್ತಿರುವ ವ್ಯಕ್ತಿ ಮತ್ತು ಪ್ರತಿಷ್ಠಿತ ಐಷಾರಾಮಿ ಸ್ಪೋರ್ಟ್ಸ್ ಕಾರಿನ ಮಾಲೀಕರ ನಡುವಿನ ಗಲಾಟೆಗೆ ಉದ್ದೇಶಪೂರ್ವಕವಾಗಿಯೇ ಕಾರಿಗೆ ಬೆಂಕಿ ಹಚ್ಚಲಾಗಿದೆ.




