ಮನೆಯಲ್ಲಿ ಮದ್ಯ ಹುಡುಕುತ್ತಿದ್ದಾಗ 18 ಕೋಟಿ ರೂ. ನಗದು ಪತ್ತೆ
ಧಾರವಾಡ: ಇಲ್ಲಿನ ಬಸವರಾಜ ದುತ್ತಣ್ಣವರ ಎಂಬವರ ಮನೆ ಮೇಲೆ ಚುನಾವಣಾ ಕ್ಷಿಪ್ರ ಕಾರ್ಯಪಡೆ ಅಧಿಕಾರಿಗಳು ದಾಳಿ ನಡೆಸಿ 18 ಕೋಟಿ ನಗದು ವಶಪಡಿಸಿಕೊಂಡಿದ್ದಾರೆ.
ಧಾರವಾಡದ ದಾಸನಕೊಪ್ಪ ಸರ್ಕಲ್ ಬಳಿ ಇರುವ ಅರ್ನಾ ಅಪಾರ್ಟ್‌ಮೆಂಟ್‌ನಲ್ಲಿ ಬಸವರಾಜ್ ದುತ್ತಣ್ಣವರಮನೆ ಇದೆ. ಚುನಾವಣೆ ಹಿನ್ನೆಲೆ ಮನೆಯಲ್ಲಿ ಮದ್ಯ ಸಂಗ್ರಹಿಸಿ ಇಟ್ಟ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಚುನಾವಣಾ ಕ್ಷಿಪ್ರ ಕಾರ್ಯಪಡೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಮನೆಯಲ್ಲಿ ಮದ್ಯ ಹುಡುಕುತ್ತಿದ್ದಾಗ ಅಲ್ಕೆರಾದಲ್ಲಿ ಹಣ ಪತ್ತೆಯಾಗಿದೆ. ಇದಕ್ಕೂ ಮೊದಲು ಮನೆಯಲ್ಲಿದ್ದ ವಿವಿಧ ಚೀಲಗಳಲ್ಲಿ ಮದ್ಯ ಹುಡುಕಿದ ಅಧಿಕಾರಿಗಳಿಗೆ ಮದ್ಯದ ಬಾಟ್ಲಿಗಳು ಸಿಗದೆ ಹೋದಾಗ ಅಲ್ಕೆರಾದಲ್ಲೂ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಬೃಹತ್ ಮೊತ್ತ ಪತ್ತೆಯಾಗಿದೆ. ಸ್ಥಳಕ್ಕೆ ಎಸಿಪಿ ಬಸವರಾಜ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




